ಅಯೋಧ್ಯೆ ತೀರ್ಪು : ಕಡಲೂರು ಹೇಗಿತ್ತು ಗೊತ್ತಾ?
ಅಯೋಧ್ಯಾ ಪ್ರಕರಣದ ತೀರ್ಪು ಸುಪ್ರೀಂ ಕೋರ್ಟ್ ಪ್ರಕಟಿಸಿದ ಹಿನ್ನಲೆಯಲ್ಲಿ ಮಂಗಳೂರು ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಆದರೆ ಮಂಗಳೂರು ನಗರದಲ್ಲಿ ಜನ ಜೀವನ ಎಂದಿನಂತೆ ಇತ್ತು. ವಾಹನ ಸಂಚಾರ ಕೂಡ ಯಾವುದೇ ಅಡಚಣೆ ಇರಲಿಲ್ಲ. ಖಾಸಗಿ ಬಸ್, ಕೆ ಎಸ್ ಆರ್ ಟಿ ಸಿ ಬಸ್ ಸಂಚಾರ ಕೂಡ ಎಂದಿನಂತೆ ಇತ್ತು. ಆದರೆ ಜನ ಸಂಚಾರ ವಿರಳವಾಗಿತ್ತು. ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾಡಳಿತ ಬಹಳಷ್ಟು ಮುಂಜಾಗ್ರತಾ ಕ್ರಮ ಕೈಗೊಂಡಿತ್ತು.