ತೀರ್ಪು ನಮಗೆ ಸಮಾಧಾನ ತಂದಿಲ್ಲ - ಮುಸ್ಲಿಂ ವೈಯಕ್ತಿ ಕಾನೂನು ಮಂಡಳಿ

ಶನಿವಾರ, 9 ನವೆಂಬರ್ 2019 (12:44 IST)
ನವದೆಹಲಿ: ಅಯೋಧ್ಯೆ ಕುರಿತು ಸುಪ್ರೀಂಕೋರ್ಟ್ ಇಂದು ಮಹತ್ತರವಾದ ತೀರ್ಪು ನೀಡಿದೆ.  ವಿವಾದಿತ ಭೂಮಿ ಹಿಂದೂಗಳ ಪಾಲಾಗಿದೆ. ಮುಸ್ಲಿಂರಿಗೆ ಪರ್ಯಾಯ 5 ಎಕರೆ ಭೂಮಿಯನ್ನು ನೀಡಲಾಗಿದೆ.ಆದರೆ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಗೆ ಈ ತೀರ್ಪು ಸಮಾಧಾನ ತಂದಿಲ್ಲವೆಂದು ದೆಹಲಿಯಲ್ಲಿ ಹೇಳಿದೆ.




ಸುಪ್ರೀಂಕೋರ್ಟ್ ತೀರ್ಪನ್ನು ನಾವು ಗೌರವಿಸುತ್ತೇವೆ.ಆದರೆ ತೀರ್ಪು ನಮಗೆ ಸಮಾಧಾನ ತಂದಿಲ್ಲ. ನಾವು ನಿರೀಕ್ಷಿಸಿದಂತೆ ತೀರ್ಪು ಬಂದಿಲ್ಲ. ನಮ್ಮ ಭೂಮಿಯನ್ನು ಬೇರೆಯವರಿಗೆ ಕೊಡಲಾಗಿದೆ ಎಂದು ದೆಹಲಿಯಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹೇಳಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ