ಅಗತ್ಯ ಬೋಧಕೇತರ ಸಿಬ್ಬಂದಿ ನೇಮಕವಾಗದ ಹಿನ್ನಲೆ; ಹಾಸನ ವೈದ್ಯಕೀಯ ಕಾಲೇಜು ಮಾನ್ಯತೆ ರದ್ದಾಗುವ ಆತಂಕ
ಬುಧವಾರ, 12 ಫೆಬ್ರವರಿ 2020 (11:09 IST)
ಹಾಸನ : ಹಾಸನ ವೈದ್ಯಕೀಯ ಕಾಲೇಜು ಮಾನ್ಯತೆ ರದ್ದಾಗುವ ಹಿನ್ನಲೆಯಲ್ಲಿ ಕಾಲೇಜು ಮುಚ್ಚುವ ಆತಂಕ ಎದುರಾಗಿದೆ.
ಹಾಸನ ವೈದ್ಯಕೀಯ ಕಾಲೇಜಿನಲ್ಲಿ ಅಗತ್ಯ ಬೋಧಕೇತರ ಸಿಬ್ಬಂದಿ ನೇಮಕವಾಗದೆ ಸಮಸ್ಯೆ ಸೃಷ್ಟಿಯಾಗಿದ್ದು, ಭಾರತೀಯ ವೈದ್ಯಕೀಯ ಪರಿಷತ್ ನಿಯಮಾವಳಿ ಪ್ರಕಾರ ನೇಮಕವಾಗದಿದ್ದರೆ ಮಾನ್ಯತೆ ರದ್ದಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಕಾಲೇಜಿನಲ್ಲಿ 25 ಬೋಧಕ, 99 ಬೋಧಕೇತರ ಸಿಬ್ಬಂದಿ ನೇಮಿಸಬೇಕು. ಏಪ್ರಿಲ್ ಅಂತ್ಯದೊಳಗೆ ನೇಮಕಾತಿ ಆಗದಿದ್ದರೆ ತೊಂದರೆಯಾಗಲಿದ್ದು, ಸಿಬ್ಬಂದಿ ನೇಮಕ ಮಾಡದಿದ್ದರೆ ಮಾನ್ಯತೆ ರದ್ದಾಗುವ ಆತಂಕ ಎದುರಾಗಿದೆ.