ಮೊಬೈಲ್ ಕೊಡಲಿಲ್ಲವೆಂದು ನೇಣಿಗೆ ಶರಣಾದ ಬಾಲಕ, ನೋಡುತ್ತಾ ನಿಂತಿದ್ದ ತಂಗಿ

Krishnaveni K

ಬುಧವಾರ, 29 ಜನವರಿ 2025 (10:45 IST)
ಬೆಂಗಳೂರು: ಮೊಬೈಲ್ ಕೊಡಲಿಲ್ಲವೆಂದು ಬೆಂಗಳೂರಿನಲ್ಲಿ ಬಾಲಕನೊಬ್ಬ ನೇಣಿಗೆ ಶರಣಾಗಿದ್ದು, ಆತನ ತಂಗಿ ಏನೂ ಅರಿಯದೇ ನೋಡುತ್ತಾ ನಿಂತಿದ್ದಳು.

ಬೆಂಗಳೂರಿನಲ್ಲಿ ಈ ಘಟನೆ ನಡೆದಿದೆ. ಮೊಬೈಲ್ ಚಟಕ್ಕೆ ಬಿದ್ದಿದ್ದ 13 ವರ್ಷ ಬಾಲಕ ಧ್ರುವ ಆತ್ಮಹತ್ಯೆ ಮಾಡಿಕೊಂಡವನು. ಪೋಷಕರು ಕೆಲಸಕ್ಕೆಂದು ಹೋಗಿದ್ದಾಗ ಅಣ್ಣ ಮತ್ತು ತಂಗಿ ಮಾತ್ರ ಮನೆಯಲ್ಲಿದ್ದರು. ಈ ವೇಳೆ ತನ್ನ ಉಡದಾರವನ್ನೇ ಬಿಚ್ಚಿ ಫ್ಯಾನ್ ಗೆ ಕಟ್ಟಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಆದರೆ ದೇಹದ ಭಾರ ತಡೆದುಕೊಳ್ಳಲಾಗದೇ ಉಡದಾರ ಕಡಿದುಬಿದ್ದಿದೆ. ಜೊತೆಗೆ ಬಾಲಕನೂ ಕೆಳಗೆ ಬಿದ್ದಿದ್ದಾನೆ. ಅಣ್ಣ ಏನು ಮಾಡುತ್ತಿದ್ದಾನೆ ಎಂಬ ಅರಿವೂ ಇಲ್ಲದೇ ತಂಗಿ ನೋಡುತ್ತಾ ನಿಂತಿದ್ದಳು. ಬಾಲಕ ಬಿದ್ದ ವೇಳೆಯೇ ತಾಯಿ ಕೆಲಸ ಮುಗಿಸಿ ಬಂದಿದ್ದಾರೆ.

ತಕ್ಷಣವೇ ಬಾಲಕನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅಷ್ಟರಲ್ಲಿ ಆತನ ಪ್ರಾಣ ಪಕ್ಷಿ ಹಾರಿ ಹೋಗಿದೆ. ಬಾಲಕನ ತಂದೆ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದರೆ ತಾಯಿ ಗಾರ್ಮೆಂಟ್ ಕೆಲಸ ಮಾಡುತ್ತಿದ್ದರು. ಪ್ರಾಥಮಿಕ ತನಿಖೆ ನಡೆಸಿದ ಪೊಲೀಸರು ಅತಿಯಾದ ಮೊಬೈಲ್ ಬಳಕೆಯೇ ಬಾಲಕ ಈ ಕೃತ್ಯಕ್ಕೆ ಮುಂದಾಗಿರುವುದಕ್ಕೆ ಕಾರಣ ಎಂದು ಕಂಡುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ