ಟೆಕ್ ಹಬ್ ಗಳ ಪಟ್ಟಿಯಲ್ಲಿ ಬೆಂಗಳೂರಿಗೆ 23 ನೇ ಸ್ಥಾನ
ಟಾಪ್ 30 ಜಾಗತಿಕ ಟೆಕ್ ಹಬ್‌ಗಳ ಪಟ್ಟಿಯಲ್ಲಿ ಬೆಂಗಳೂರು 23ನೇ ಸ್ಥಾನ ಪಡೆದುಕೊಂಡಿದೆ,ಕಾರ್ಯಕ್ಷಮತೆ, ಪ್ರತಿಭೆ, ಸಂಪರ್ಕ ಸಾಧನ ಸೇರಿದಂತೆ 7 ಮಾನದಂಡಗಳ ಆಧಾರದಲ್ಲಿ ಈ ಸ್ಥಾನಗಳನ್ನು ನೀಡಲಾಗಿದೆ.ಬೆಂಗಳೂರು ಮತ್ತು ಕರ್ನಾಟಕದ ಇತರ ಪ್ರದೇಶಗಳು ಜಗತ್ತಿನಲ್ಲೇ 4ನೇ ಅತಿದೊಡ್ಡ ತಂತ್ರಜ್ಞಾನ ಮತ್ತು ನಾವೀನ್ಯತೆಯ ಕ್ಲಸ್ಟರ್‌ಗಳಾಗಿ ರೂಪುಗೊಂಡಿವೆ. ಇಲ್ಲಿ 400ಕ್ಕೂ ಅಧಿಕ ಜಾಗತಿಕ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳಿವೆ ಎಂದು ಉಲ್ಲೇಖಿಸಲಾಗಿದೆ. ಟಾಪ್ 100 ಸ್ಟಾರ್ಟ್ ಅಪ್ ಹಬ್‌ಗಳ ಪೈಕಿ ಮುಂಬೈ ಮೊದಲ ಸ್ಥಾನವನ್ನು ಪಡೆದುಕೊಂಡರೇ ಲಂಡನ್ ಎರಡನೇ ಸ್ಥಾನವನ್ನು ಪಡೆದಿದೆ. ಇನ್ನುಳಿದಂತೆ ಚೆನ್ನೈ,ಪುಣೆ ಮತ್ತು ಹೈದರಾಬಾದ್ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.