ಬೆಂಗಳೂರಿಗೆ ಟಫ್ ರೂಲ್ಸ್

ಭಾನುವಾರ, 2 ಜನವರಿ 2022 (17:17 IST)
ರಾಜ್ಯದಲ್ಲಿ ಕೊರೊನಾ ಸೋಂಕು ಮತ್ತೆ ಆರ್ಭಟಿಸಲು ಶುರುವಾಗಿದೆ.
 
ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಒಮಿಕ್ರಾನ್ ಸೋಂಕಿನ ಮಧ್ಯೆ ಕೊರೊನಾ ಸೋಂಕು ಕೂಡ ಹೆಚ್ಚಳವಾಗುತ್ತಿದೆ.
 ಸಭೆಯಲ್ಲಿ ಬೆಂಗಳೂರು ನಗರಕ್ಕೆ ಸೀಮಿತವಾಗಿ ಟಫ್ ರೂಲ್ಸ್ ಜಾರಿ ಮಾಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಹೇಳಲಾಗುತ್ತಿದೆ.
 
ಮುಖ್ಯವಾಗಿ ಬೆಂಗಳೂರಿನಲ್ಲಿ ನೈಟ್ ಕರ್ಫ್ಯೂ ವಿಸ್ತರಣೆ ಮಾಡುವ ಬಗ್ಗೆ ತಜ್ಞರ ಜೊತೆ ಮಾತುಕತೆ ನಡೆಸಿದ್ದಾರಂತೆ.
 
ಸಂಜೆ ಐದು ಗಂಟೆಯಿಂದಲೇ ನಗರದಲ್ಲಿ ಕರ್ಫ್ಯೂ ಹಾಕುವುದು. ನೈಟ್ ಕರ್ಫ್ಯೂವನ್ನ ಜನವರಿ 20 ನೇ ತಾರೀಕನ ವರೆಗೂ ವಿಸ್ತರಿಸುವುದು.
 
ಹಾಗೇ ಹೋಟೆಲ್, ಮಾಲ್, ಥೀಯೆಟರ್ ಗಳಲ್ಲಿ ಶೇಕಡಾ 50 ರ ನಿಯಮ ಮುಂದುವರಿಕೆ ಬಗ್ಗೆ ಸಿಎಂ ಚರ್ಚಿಸಿದ್ದಾರೆ ಎಂದು ಹೇಳಲಾಗುತ್ತಿದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ