ಕಾರು ಚಲಾಯಿಸುತ್ತಾ ಕಚೇರಿ ಕೆಲಸ ಮಾಡುತ್ತಿದ್ದ ಮಹಿಳೆ: ಮುಂದೇನಾಯ್ತು ನೋಡಿ
ಇತ್ತೀಚೆಗಿನ ದಿನಗಳಲ್ಲಿ ಖಾಸಗಿ ಕಂಪನಿಗಳ ನೌಕರರ ಕೆಲಸದ ಒತ್ತಡ ಹೇಳತೀರದು. ಆದರೆ ವಾಹನ ಎಂದು ಬಂದ ಮೇಲೆ ಕೆಲವೊಂದು ನಿಯಮಗಳನ್ನು ಪಾಲಿಸಲೇಬೇಕು. ಆದರೆ ಈ ಮಹಿಳೆ ಕಾರು ಚಲಾಯಿಸುತ್ತಲೇ ಲ್ಯಾಪ್ ಟಾಪ್ ಹಿಡಿದು ಕೆಲಸ ಮಾಡಿದ್ದಳು.
ಇದು ಬೆಂಗಳೂರು ಸಂಚಾರಿ ಪೊಲೀಸರ ಕಣ್ಣಿಗೆ ಬಿದ್ದಿದೆ. ಮಹಿಳೆ ಕಾರು ಚಲಾಯಿಸುತ್ತಲೇ ತನ್ನ ಸ್ಟೇರಿಂಗ್ ಎದುರು ಲ್ಯಾಪ್ ಟಾಪ್ ತೆರೆದಿಟ್ಟು ಕಚೇರಿ ಕೆಲಸದಲ್ಲಿ ಮುಳುಗಿರುವ ವಿಡಿಯೋ ಪೊಲೀಸರ ಕಣ್ಣಿಗೆ ಬಿದ್ದಿದೆ.
ಇದೀಗ ಆ ಮಹಿಳಾ ಚಾಲಕಿಯನ್ನು ಪತ್ತೆ ಮಾಡಿರುವ ಬೆಂಗಳೂರು ಉತ್ತರ ವಲಯದ ಸಂಚಾರಿ ಪೊಲೀಸರು ಆಕೆಗೆ ದಂಡ ವಿಧಿಸಿ ಮತ್ತೆ ಹೀಗೆ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ. ಈ ವಿಡಿಯೋವನ್ನು ಹಂಚಿಕೊಂಡಿರುವ ಉತ್ತರ ವಲಯದ ಸಂಚಾರಿ ವಿಭಾಗದ ಡಿಸಿಪಿ ವರ್ಕ್ ಫ್ರಂ ಹೋಂ ಓಕೆ, ಆದರೆ ವರ್ಕ್ ಫ್ರಂ ಕಾರು ಬೇಡ ಎಂದು ಎಚ್ಚರಿಕೆ ನೀಡಿದ್ದಾರೆ.