ಕರ್ನಾಟಕ ಹವಾಮಾನ: ರಾಜ್ಯದ ಈ ಜಿಲ್ಲೆಗಳಿಗೆ ಬೇಸಿಗೆ ಶಾಕ್ ನೀಡಿದ ಹವಾಮಾನ ವರದಿ

Krishnaveni K

ಶುಕ್ರವಾರ, 14 ಫೆಬ್ರವರಿ 2025 (09:00 IST)
ಬೆಂಗಳೂರು: ಕರ್ನಾಟಕದ ಹವಾಮಾನ ವರದಿ ಪ್ರಕಾರ ಈ ಬಾರಿ ಬೇಸಿಗೆಯಲ್ಲಿ ತಾಪಮಾನ ದಾಖಲೆ ಏರಿಕೆ ಕಾಣಲಿದ್ದು ಈ ಜಿಲ್ಲೆಗಳಲ್ಲಿ ಹಾಟ್ ಶಾಕ್ ಗ್ಯಾರಂಟಿಯಾಗಿದೆ.

ಈ ವರ್ಷ ಮಳೆಗಾಲ ಚೆನ್ನಾಗಿ ಆಗಿತ್ತು. ಚಳಿಗಾಲವೂ ತಕ್ಕಮಟ್ಟಿಗಿತ್ತು. ಆದರೆ ಬೇಸಿಗೆಯಲ್ಲಿ ಈ ಬಾರಿ ತಾಪಮಾನ ದಾಖಲೆಯ ಪ್ರಮಾಣಕ್ಕೆ ಏರಿಕೆಯಾಗಲಿದೆ ಎಂದು ಹವಾಮಾನ ವರದಿಗಳು ಈಗಾಗಲೇ ಎಚ್ಚರಿಕೆ ನೀಡಿವೆ.

ಅದರಲ್ಲೂ ವಿಶೇಷವಾಗಿ ರಾಜ್ಯದ 15 ಜಿಲ್ಲೆಗಳಿಗೆ ಈ ಬಾರಿ ಬೇಸಿಗೆ ಅಕ್ಷರಶಃ ಶಾಕ್ ನೀಡಲಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಈ ಬಾರಿ ಗರಿಷ್ಠ ತಾಪಮಾನ 39 ಡಿಗ್ರಿಯವರೆಗೆ ತಲುಪಲಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ಹೇಳಿತ್ತು.

ಇದೀಗ ಬೆಂಗಳೂರು ನಗರ, ಗ್ರಾಮಾಂತರ ಮಾತ್ರವಲ್ಲದೆ, ದಕ್ಷಿಣ ಕನ್ನಡ, ಬಳ್ಳಾರಿ, ಉಡುಪಿ, ಚಾಮರಾಜನಗರ, ಚಿತ್ರದುರ್ಗ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಕೋಲಾರ, ಮೈಸೂರು, ಶಿವಮೊಗ್ಗ ಜಿಲ್ಲೆಗಳಲ್ಲೂ ತಾಪಮಾನ ದಾಖಲೆ ಪ್ರಮಾಣಕ್ಕೆ ಏರಿಕೆಯಾಗಲಿದೆ ಎಂದು ಮುನ್ಸೂಚನೆ ಸಿಕ್ಕಿದೆ. ಹೀಗಾಗಿ ಈ ಬಾರಿ ಬೇಸಿಗೆಯ ಶಾಖ ತಡೆಯಲು ಈಗಲೇ ಸಿದ್ಧರಾಗಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ