ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ನಿಂದ ಬಿಬಿಎಂಪಿಗೆ ವಂಚನೆ

ಗುರುವಾರ, 7 ಡಿಸೆಂಬರ್ 2023 (15:00 IST)
ಕಳೆದ ಹತ್ತು ವರ್ಷಗಳಿಂದ ಜಾಹೀರಾತು ಶುಲ್ಕ ಕಟ್ಟದೇ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಬಿಬಿಎಂಪಿಗೆ ಹತ್ತು ವರ್ಷಗಳಿಂದ ಶುಲ್ಕ ಕಟ್ಟದೇ ನೂರಾರು ಕೋಟಿ‌ ವಂಚನೆ ನಡೆಸಿದೆ.ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ Ksca ವಂಚನೆ ಬಯಲಿಗೆ ಬಂದಿದೆ.
 
 ಪ್ರತಿ ಪಂದ್ಯ ನಡೆಯುವಾಗ ವಿವಿಧ ಸಂಸ್ಥೆ, ಬ್ರ್ಯಾಂಡ್ ಗಳ ಜಾಹೀರಾತು ಪ್ರದರ್ಶನ ಮಾಡ್ತಿದ್ದು,ಈ ವೇಳೆ ಪಾಲಿಕೆಗೆ ಸಾಮಾನ್ಯವಾಗಿ ಜಾಹೀರಾತು ಶುಲ್ಕ Ksca ಪಾವತಿಸಬೇಕಿದೆ.ಸಾವಿರಾರು ಕೋಟಿ ರೂಪಾಯಿ ಜಾಹೀರಾತು ಫಲಕ ಪ್ರದರ್ಶಿಸಿ Ksca ಯಿಂದ ದುಡ್ಡು ಸಂಗ್ರಹ ಮಾಡಿದೆ.ಆದರೆ ನಯಾ ಪೈಸೆ ಇದುವರೆಗೆ ಪಾಲಿಕೆಗೆ Ksca ಶುಲ್ಕ ಕಟ್ಟಿಲ್ಲ.ಜಾಹಿರಾತು ಶುಲ್ಕ ಕಟ್ಟದಿದ್ದರು ಬಿಬಿಎಂಪಿ ಡಿಮ್ಯಾಂಡ್ ನೋಟಿಸ್ ಕೊಡದಿರೋ‌ ಆರೋಪ ಕೇಳಿಬಂದಿದೆ.

ಮನೆ ಕಂದಾಯ ಕಟ್ಟದಿದ್ದರೆ ಮನೆ ಮುಂದೆ ಬಂದು ಬಿಬಿಎಂಪಿ ಅಧಿಕಾರಿಗಳು ನಿಲ್ಲಲಿದ್ದಾರೆ. ಜವಾಬ್ದಾರಿ ಹೊತ್ತ ಬಿಬಿಎಂಪಿ ಕಂದಾಯ ಡಿಮ್ಯಾಂಡ್ ಗೆ ನೋಟಿಸ್ ಜಾರಿ ಮಾಡದೇ ಅಪರಾಧ ಮಾಡಿದೆ.ಅತ್ತ ಜಾಹಿರಾತು ಶುಲ್ಕ ಕಟ್ಟಬೇಕು ಎಂಬುದು ಗೊತ್ತಿದ್ದರು ಜಾಹಿರಾತು ಶುಲ್ಕ ಕಟ್ಟದೇ Ksca ತಪ್ಪು ಮಾಡಿದೆ.ಈ ಬಗ್ಗೆ ಸರ್ಕಾರ ಮಟ್ಟದಲ್ಲಿ ತನಿಖೆಗೆ ಆಗ್ರಹಿಸಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ