ಈದ್ಗಾ ಮೈದಾನದ ಕುರಿತಾಗಿ ಬಿಬಿಎಂಪಿ ಯೂ ಟರ್ನ್

ಬುಧವಾರ, 22 ಜೂನ್ 2022 (20:44 IST)
ಚಾಮರಾಜಪೇಟೆಯ ಈದ್ಗಾ ಮೈದಾನದ ಕುರಿತಾಗಿ ಬಿಬಿಎಂಪಿ ಯೂ ಟರ್ನ್ ಹೊಡೆದಿದೆ. ಈದ್ಗಾ ಮೈದಾನ ಬಿಬಿಎಂಪಿಗೆ ಸೇರಿದ ಆಸ್ತಿಯಲ್ಲ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಸ್ಪಷ್ಟನೆ ಕೊಟ್ಟಿದ್ದಾರೆ. ಇದಕ್ಕೂ ಮುನ್ನ ಬಿಬಿಎಂಪಿಯ ಜಂಟಿ ಆಯುಕ್ತ, ಈದ್ಗಾ ಮೈದಾನ ಬಿಬಿಎಂಪಿಗೆ ಸೇರಿದ್ದು ಎಂದು ಹೇಳಿದ್ದರು. ಆದರೆ, ವಕ್ಫ್ ಬೋರ್ಡ್ ಈ ಜಾಗ ತಮಗೆ ಸೇರಿದ್ದು ಎಂದು ಹೇಳಿ ದಾಖಲೆಯನ್ನು ಬಿಬಿಎಂಪಿಗೆ ಸಲ್ಲಿಸಿತ್ತು. ಬಿಬಿಎಂಪಿ ಕಾನೂನು ವಿಭಾಗ ಈ ದಾಖಲೆಯನ್ನು ಪರಿಶೀಲನೆ ಮಾಡುವ ವೇಳೆಯಲ್ಲಿಯೇ ಆಯುಕ್ತ ತುಷಾರ್ ಗಿರಿನಾಥ್ ಇದು ನಮ್ಮ ಆಸ್ತಿಯಲ್ಲ, ವಕ್ಫ್ ಬೋರ್ಡ್ ಸೂಕ್ತ ದಾಖಲೆ ನೀಡಿದರೆ ಖಾತಾ ಮಾಡಿಕೊಡಲು ಸಿದ್ಧ ಎಂದು ಹೇಳಿದೆ. ಇಲ್ಲದೇ ಇದ್ದಲ್ಲಿ ಸರ್ಕಾರ ಮಾರ್ಗಸೂಚಿಯಂತೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ