ಮನೆಯ ಹೊರಗಡೆ ನಿಂತಿದ್ದ ವ್ಯಕ್ತಿ ಮೇಲೆ ಕರಡಿ ದಾಳಿ: ತಲೆಯ ಮೇಲಿನ ಚರ್ಮವೇ ಇಲ್ಲ

Sampriya

ಗುರುವಾರ, 25 ಜುಲೈ 2024 (17:20 IST)
Photo Courtesy X
ಹಾಸನ: ಕರಡಿ ದಾಳಿಗೆ ವೃದ್ಧ ರೈತರೊಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಬಾಣಾವರ ಹೋಬಳಿಯ ಜನ್ನಾವರ ಗ್ರಾಮದಲ್ಲಿ ನಡೆದಿದೆ.

ಇನ್ನೂ ಕರಡಿ ದಾಳಿಗೆ ರೈತನ ತಲೆಯ ಚರ್ಮವೆಲ್ಲ ಕಿತ್ತು ಹೋಗಿವೆ. ಮುಖದ ಮೇಲೂ ಕರಡಿ ದಾಳಿ ಮಾಡಿದ್ದು, ರಕ್ತದ ಮಡುವಿನಲ್ಲಿದ್ದ ಮಹಾಲಿಂಗಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಹಾಲಿಂಗಪ್ಪ ಅವರು ತಮ್ಮ ತೋಟದ ಮನೆಯ ಬಳಿ ನಿಂತಿದ್ದ ವೇಳೆ ಅವರ ಮೇಲೆ ಏಕಾಏಕಿ ಕರಡಿ ದಾಳಿ ನಡೆಸಿದೆ. ಈ ವೇಳೆ ಅವರ ತಲೆಯ ಚರ್ಮವನ್ನೆಲ್ಲ ಕಿತ್ತು ಹಾಕಿ, ಮುಖಕ್ಕೆ ಗಂಭೀರ ಗಾಯ ಮಾಡಿದೆ. ಈ ಘಟನೆ ಬೆಳಿಗ್ಗೆ 6 ಗಂಟೆಗೆ ನಡೆದಿದೆ. ಈ ವೇಳೆ ಕರಡಿ ಜತೆ ಹೋರಾಡಿ ಮಹಾಲಿಂಗ ಅವರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಸದ್ಯ ಅವರನ್ನು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ