ಕರ್ನಾಟಕದಲ್ಲಿ ನೀಟ್ ಬೇಡ, ಸಿಇಟಿನೇ ಅಂತಿಮ

Krishnaveni K

ಗುರುವಾರ, 25 ಜುಲೈ 2024 (14:06 IST)
ಬೆಂಗಳೂರು: ಕರ್ನಾಟಕದಲ್ಲಿ ಇನ್ನು ಮುಂದೆ ವೈದ್ಯಕೀಯ ಕೋರ್ಸ್ ಪ್ರವೇಶಾತಿಗೆ ನೀಟ್ ರದ್ದು ಮಾಡಿ ಸಿಇಟಿಯನ್ನೇ ಅಂತಿಮಗೊಳಿಸಬೇಕೆಂಬ ನಿರ್ಣಯಕ್ಕೆ ಇಂದು ಸದನದಲ್ಲಿ ನಿರ್ಣಯ ಮಂಡಿಸಲಾಯಿತು.

ನೀಟ್ ಪರೀಕ್ಷೆ ರದ್ದುಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಇಂದು ನಿರ್ಣಯ ಮಂಡಿಸಲಾಯಿತು. ನೀಟ್ ಬದಲು ಸಿಇಟಿ ಅಂಕವನ್ನೇ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳಿಗೆ ಪ್ರವೇಶ ಪರೀಕ್ಷೆಯನ್ನಾಗಿ ಮಾಡಬೇಕೆಂದು ನಿರ್ಣಯ ಅಂಗೀಕರಿಸಲಾಗಿದೆ.

ನೀಟ್ ಪರೀಕ್ಷೆಯಿಂದ ನಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಬಡ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಕಾಂಗ್ರೆಸ್ ಸರ್ಕಾರದ ವಾದವಾಗಿದೆ. ಇದರ ಜೊತೆಗೆ ಇತ್ತೀಚೆಗೆ ನಡೆದ ನೀಟ್ ಪರೀಕ್ಷೆಯ ಅಕ್ರಮ ಬಯಲಾದ ಬಳಿಕ ಈ ಪರೀಕ್ಷೆಯ ಮೇಲಿನ ವಿಶ್ವಾಸಾರ್ಹತೆಯೇ ಕಡಿಮೆಯಾಗಿದೆ ಎಂದಿದೆ.

ಆದರೆ ಇದೇ ನಿರ್ಣಯ ಮಂಡಿಸಿದ ತಮಿಳುನಾಡಿಗೆ ಸುಪ್ರೀಂಕೋರ್ಟ್ ನಲ್ಲಿ ಹಿನ್ನಡೆಯಾಗಿದೆ. ಇದುವರೆಗೆ ತಮಿಳುನಾಡು ವಿಧಾನಸಭೆಯಲ್ಲೂ ನಿರ್ಣಯ ಅಂಗೀಕಾರವಾದರೂ ನೀಟ್ ರದ್ದತಿ ಸಾಧ್ಯವಾಗಿಲ್ಲ. ಇದೀಗ ಕರ್ನಾಟಕದಲ್ಲೂ ಕೇಂದ್ರದ ಒಪ್ಪಿಗೆಯಿಲ್ಲದೇ ಕರ್ನಾಟಕದಲ್ಲೂ ನೀಟ್ ರದ್ದುಗೊಳಿಸಲು ಸಾಧ್ಯವಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ