ಬೆಂಗಳೂರು: ಕಳೆದ 10 ದಿನಗಳಿಂದ ಬೆಂಗಳೂರಿನಲ್ಲಿ ಮಳೆಯಾಗುತ್ತಿದೆ. ಇಂದು ಮಳೆಯಾಗುವ ಸಾಧ‍್ಯತೆಯಿದೆ ಎನ್ನಲಾಗಿದೆ. ಇಂದು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಆರ್ ಸಿಬಿ ಮತ್ತು ಸಿಎಸ್ ಕೆ ನಡುವೆ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೆ ಮಳೆ ಸಾಧ‍್ಯತೆ ಬಗ್ಗೆ ಇಲ್ಲಿದೆ ಡೀಟೈಲ್ಸ್.
ಇಂದು ಬೆಳಿಗ್ಗೆಯಿಂದಲೇ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದೆ. ಇಂದು ಬೆಳಿಗ್ಗಿನ ಗರಿಷ್ಠ ತಾಪಮಾನ 27 ಡಿಗ್ರಿಯಷ್ಟಿತ್ತು. ಆದರೆ ಹಾಗಂತ ಕ್ರಿಕೆಟ್ ಪ್ರೇಮಿಗಳು ಇಂದು ಮಳೆಯಿರಲ್ಲ ಎಂದು ಸಂಭ್ರಮಿಸಬೇಕಾಗಿಲ್ಲ. ಹವಾಮಾನ ವರದಿ ಪ್ರಕಾರ ಅಪರಾಹ್ನದಿಂದ ಮಳೆಯಾಗುವ ಸಾಧ‍್ಯತೆಯಿದೆ.
ಇಂದು ಅಪರಾಹ್ನ 2 ಗಂಟೆಯ ನಂತರ ಮಳೆಯಾಗುವ ಸಾಧ್ಯತೆ ಶೇ.70 ಕ್ಕಿಂತಲೂ ಹೆಚ್ಚಿದೆ. ಇದು ರಾತ್ರಿಯವರೆಗೂ ಮುಂದುವರಿಯುವ ಸಾಧ‍್ಯತೆಯಿದೆ. ಚಿನ್ನಸ್ವಾಮಿ ಮೈದಾನದ ಸುತ್ತವೂ ಅಪರಾಹ್ನ 2 ರ ನಂತರ ಮಳೆಯಾಗುವ ಸಾಧ್ಯತೆ ಶೇ.100 ರಷ್ಟು ಸಾಧ‍್ಯತೆಯಿದೆ.
ಕೇವಲ ಬೆಂಗಳೂರಿನಲ್ಲಿ ಮಾತ್ರವಲ್ಲ ಇಡೀ ರಾಜ್ಯದಲ್ಲೂ ಇಂದು ಅಪರಾಹ್ನದ ನಂತರ ಮಳೆಯಾಗುವ ಸಾಧ‍್ಯತೆ ದಟ್ಟವಾಗಿದೆ. ಇಂದು ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಶಿಯಸ್ ಆಗಿದ್ದು, ಕನಿಷ್ಠ 23 ಡಿಗ್ರಿಯಾಗಲಿದೆ. ಇಂದಿನಿಂದ ನಿರಂತರ ನಾಲ್ಕು ದಿನಗಳವರೆಗೆ ಮಳೆಯಾಗುವ ಸಾಧ‍್ಯತೆಯಿದೆ.