ಕಿರುಕುಳ ನೀಡುತ್ತಿದ್ದ ಬಾಮೈದನನ್ನು ಪರಲೋಕಕ್ಕೆ ಕಳಿಸಿದ ಭಾವ

geetha

ಸೋಮವಾರ, 22 ಜನವರಿ 2024 (15:25 IST)
ಬೆಂಗಳೂರು: ಮೃತ ಯುವಕ ಅಜಯ್‌ (26) ಮದ್ಯ ವ್ಯಸನಿಯಾಗಿದ್ದ. ಈತನ ಮೇಲೆ ಹಲಸೂರು ಹಾಗೂ ಬಾಣಸವಾಡಿ ಪೊಲೀಸ್‌ ಠಾಣೆಯಲ್ಲಿ ಹಲವು ಅಪರಾಧ ಪ್ರಕರಣಗಳು ದಾಖಲಾಗಿತ್ತು. ದೊಡ್ಡ ಬಾಣಸವಾಡಿಯಲ್ಲಿರುವ ಅಕ್ಕನ ಮನೆಗೆ ಆಗಾಗ್ಗೆ ಭೇಟಿ ನೀಡುತ್ತಿದ್ದ ಅಜಯ್‌ , ಕುಡಿತಕ್ಕೆ ಹಣ ನೀಡುವಂತೆ ಪೀಡಿಸುತ್ತಿದ್ದ. ಹಣ ನೀಡದಿದ್ದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೀದಿಯಲ್ಲಿ ರಂಪಾಟ ಎಸೆಗೆ ಅವರ ಮರ್ಯಾದೆ ತೆಗೆಯುತ್ತಿದ್ದ. ಇದರಿಂದ ಬೇಸತ್ತಿದ್ದ ಅಜಯ್‌ ಸೋದರಿ ಆತನಿಗೆ ಮನೆಗೆ ಬರಬೇಡ ಎಂದು ಹೇಳಿದ್ದರು. 

ಆದರೂ ಸಹ ಅಕ್ಕನ ಮನೆಗೆ ಹೋಗಿ ಕುಡಿತಕ್ಕೆ ಹಣ ನೀಡುವಂತೆ ಪೀಡಿಸಿದಾಗ ಭಾವ ಆತನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆಗೈದಿದ್ದಾನೆ. ಬಾಣಸವಾಡಿ ಪೊಲೀಸರು ಪ್ರಕರಣ ದಾಖಲಿಸಕೊಂಡು ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದಾರೆ. ಮದ್ಯವ್ಯಸನಿಯಾಗಿದ್ದು, ಪ್ರತಿದಿನ ಬಂದು ಕಿರುಕುಳು ನೀಡುತ್ತಿದ್ದ ಬಾಮೈದನನ್ನು ಆತನ ಸೋದರಿಯ ಪತಿಯೇ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬಾಣಸವಾಡಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.  ಮೃತ ಅಜಯ್‌ ಅಪರಾಧ ಹಿನ್ನೆಲೆಯುಳ್ಳವನಾಗಿದ್ದು, ಆರೋಪಿ ರಾಜೇಶ್‌ ಕೊಲೆ ಮಾಡಿದ ಬಳಿಕ ಪೊಲೀಸ್‌ ಠಾಣೆಗೆ ತೆರಳಿ ಶರಣಾಗಿದ್ದಾನೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ