ರಾಜ್ಯದ ಜನತೆಗೆ ಇಂದಿನಿಂದ ಬಿಗ್ ರಿಲೀಫ್; ರಾಜ್ಯದಾತ್ಯಂತ ಎಲ್ಲಿಲ್ಲಿ, ಏನಿರುತ್ತೆ..? ಏನಿರಲ್ಲ..?

ಸೋಮವಾರ, 31 ಜನವರಿ 2022 (20:33 IST)
ಬೆಂಗಳೂರು:-ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತದಂತೆ ಹಲವು ವಲಯಗಳಿಗೆ ಸರ್ಕಾರ ವಿಧಿಸಿದ್ದ ನಿರ್ಬಂಧಗಳು ಇಂದಿನಿಂದ ಅನ್ ಲಾಕ್ ಆಗಲಿವೆ.
ಇಷ್ಟು ದಿನ ರಾಜ್ಯದಲ್ಲಿ ಅರ್ಧಂಬರ್ಧ ಅನ್ ಲಾಕ್ ಆಗಿತ್ತು, ಆದ್ರೆ ಇಂದಿನಿಂದ ಬಹುತೇಕ ಎಲ್ಲವೂ ಕೂಡ ಓಪನ್ ಆಗುತ್ತಿದ್ದು, ಕೊರೊನಾ ಮೊದಲ ಹಾಗೂ ಎರಡನೇ ಅಲೆಯಲ್ಲಿ ಎಲ್ಲಾ ವಲಯಗಳು ಪುಲ್ ಫ್ರೀ ಆಗಲು ಬರೋಬ್ಬರಿ 9 ತಿಂಗಳ ಸಮಯ ತೆಗೆದುಕೊಂಡಿತ್ತು. ಆದ್ರೆ 3ನೇ ಅಲೆಯಲ್ಲಿ ಮಾತ್ರ ಜನರಿಗೆ ಮತ್ತೆ ಮತ್ತೆ ಸಮಸ್ಯೆ ಕೊಡಬಾರದು ಎಂದು ತೀರ್ಮಾನಿಸಿ ಇಂದಿನಿಂದಲೇ ಅನ್ ಲಾಕ್​ ಗೆ ಸರ್ಕಾರ ಆದೇಶಿಸಿದೆ.
 
ಯಾವುದಕ್ಕೆ ರಿಲೀಫ್.. ? ಯಾವುದಕ್ಕೆ ನಿರ್ಬಂಧ ಅನ್ನೋದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ:-
ರಾಜಧಾನಿ ಬೆಂಗಳೂರಿನಲ್ಲಿ ಶಾಲೆ, ಕಾಲೇಜುಗಳ ಪುನರ್ ಆರಂಭಗೊಳ್ಳಲಿದ್ದು, ಪಬ್, ಕ್ಲಬ್, ರೆಸ್ಟೋರೆಂಟ್, ಬಾರ್, ಹೋಟೆಲ್ ಗಳಲ್ಲಿ 100 ಸೀಟಿಂಗ್ ಗೆ ಅವಕಾಶ ಹಾಗೂ ಮೆಟ್ರೋ , ಬಸ್ ಗಳಲ್ಲಿ ಎಲ್ಲಾ ಸೀಟ್ ಗಳನ್ನು ತುಂಬಿಸಬಹುದಾಗಿದ್ದು, ಸರ್ಕಾರಿ ಕಛೇರಿಗಳಲ್ಲಿ ಶೇ. 100ರಷ್ಟು ಸಿಬ್ಬಂದಿ ಕೆಲಸಕ್ಕೆ ಅವಕಾಶ ನೀಡಲಾಗಿದೆ.
ಥಿಯಟರ್ ಗಳು, ರಂಗಮಂದಿರಗಳು, ಆಡಿಟೋರಿಯಂಗಳಲ್ಲಿ 50-50 ರೂಲ್ಸ್ ಇದ್ದು, ಧಾರ್ಮಿಕ ಸ್ಥಳಗಳಲ್ಲಿ ದರ್ಶನ ಹಾಗೂ ಸೇವೆಗೆ 50-50 ರೂಲ್ಸ್ ಮುಂದುವರೆಯಲಿದೆ.
ಇನ್ನು, ಸ್ವಿಮ್ಮಿಂಗ್ ಪೂಲ್, ಜಿಮ್ ಗಳಲ್ಲಿ 50-50 ರೂಲ್ಸ್, ಸ್ಪೋರ್ಟ್ಸ್, ಕಾಂಪ್ಲೆಕ್ಸ್ ಮತ್ತು ಕ್ರೀಡಾಂಗಣಗಳಲ್ಲಿ ಕೂಡ 50 -50 ರೂಲ್ಸ್ ಮುಂದುವರೆಯಲಿದ್ದು, ಈ ವಲಯಗಳಲ್ಲಿ ಮತ್ತೆ 50_50 ರೂಲ್ಸ್ ಮುಂದುವರೆದಿದ್ದು ಸರ್ಕಾರದ ವಿರುದ್ದ ಅಕ್ರೋಶ ಹೊರ ಬೀಳಲಾರಂಭಿಸಿದೆ.
ಈ ಹಿನ್ನೆಲೆ ಕಲ್ಯಾಣ ಮಂಟಪ ಮಾಲೀಕರ ಸಂಘ ಸಭೆ ನಡೆಸಿ ಇಂದು ಸಿಎಂ ಬೊಮ್ಮಾಯಿ ಭೇಟಿಗೆ ಮುಂದಾಗಿದ್ದು, ಒಂದು ವೇಳೆ ಅವಕಾಶ ನೀಡದಿದ್ದರೆ ಕೋರ್ಟ್ ಮೆಟ್ಟಿಲೇರಲು ಮುಂದಾಗಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ