Bird flue: ಹಕ್ಕಿ ಜ್ವರ ಕೇಸ್ ಹೆಚ್ಚಾಯ್ತು, ಪ್ರಾಣಕ್ಕೆ ಕುತ್ತಾಗದಂತೆ ತಡೆಯುವುದು ಹೇಗೆ

Krishnaveni K

ಮಂಗಳವಾರ, 4 ಮಾರ್ಚ್ 2025 (12:09 IST)
Photo Credit: X
ಬೆಂಗಳೂರು: ರಾಜ್ಯದಲ್ಲಿ ಹಕ್ಕಿ ಜ್ವರ ಪ್ರಕರಣ ಹೆಚ್ಚಾಗಿದ್ದು, ಈ ಜ್ವರ ಲಕ್ಷಣ ಕಂಡುಬಂದರೂ ಪ್ರಾಣಾಂತಿಕವಾಗದಂತೆ ರಕ್ಷಿಸಿಕೊಳ್ಳುವುದು ಹೇಗೆ ಇಲ್ಲಿದೆ ಉಪಾಯ.

ಕೋಳಿಗಳು, ಬಾತುಕೋಳಿಗಳ ಮಾಂಸ ಸೇವನೆ, ಅವುಗಳ ಸಂಪರ್ಕ, ಹಿಕ್ಕೆಯನ್ನು ಸ್ಪರ್ಶಿಸುವುದರಿಂದ ಹಕ್ಕಿ ಜ್ವರ ಹರಡುವ ಸಾಧ್ಯತೆಯಿದೆ. ಇದೂ ಕೂಡಾ ಚೀನಾ ಜನ್ಯವಾದ ಸೋಂಕು ರೋಗವಾಗಿದ್ದು, ಸರಿಯಾದ ಚಿಕಿತ್ಸೆ ಪಡೆಯದೇ ಹೋದರೆ ಪ್ರಾಣಕ್ಕೆ ಕುತ್ತು ತರಬಹುದು.

ಗಡಿ ಜಿಲ್ಲೆಗಳಾದ ರಾಯಚೂರು, ಬಳ್ಳಾರಿ, ಚಿಕ್ಕಬಳ್ಳಾಪುರ ಮುಂತಾದ ಕಡೆ ಹಕ್ಕಿ ಜ್ವರ ಸೋಂಕು ಹೆಚ್ಚಾಗುತ್ತಿದೆ. ಹೀಗಾಗಿ ಪಶುಸಂಗೋಪನಾ ಇಲಾಖೆ ಈಗಾಗಲೇ ಕೋಳಿ ಮಾಂಸವನ್ನು 70 ಡಿಗ್ರಿ ಸೆಂಟಿಗ್ರೇಡ್ ಗಿಂತ ಅಧಿಕ ಉಷ್ಣತೆಯಲ್ಲಿ ಬೇಯಿಸಿಯೇ ಸೇವನೆ ಮಾಡಿ ಎಂದಿದೆ. ಜೊತೆಗೆ ಹಸಿ ಮಾಂಸ, ಕೋಳಿ ಮೊಟ್ಟೆ ಸೇವಿಸದಂತೆ ಸಲಹೆ ನೀಡಿದೆ.

ಮೈ ಕೈ ನೋವು, ಜ್ವರ, ಕಣ್ಣು ಉರಿ, ಕೆಲವರಲ್ಲಿ ವಾಂತಿ ಬೇಧಿ, ವಿಪರೀತ ಸುಸ್ತು, ಮಾಂಸಖಂಡಗಳಲ್ಲಿ ನೋವು ಈ ಜ್ವರದ ಲಕ್ಷಣಗಳಾಗಿವೆ. ಸೋಂಕು ದೇಹ ಪ್ರವೇಶಿಸಿದ ನಾಲ್ಕೈದು ದಿನಗಳಲ್ಲಿ ಈ ಲಕ್ಷಣಗಳು ಕಂಡುಬರುತ್ತವೆ. ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಂಡರೆ ಪ್ರಾಣಾಂತಿಕವಾಗುವುದನ್ನು ತಪ್ಪಿಸಬಹುದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ