ಬಿಟ್​​​ ಕಾಯಿನ್ ಪ್ರಕರಣ ಮರು ತನಿಖೆ

ಸೋಮವಾರ, 3 ಜುಲೈ 2023 (20:32 IST)
ಬಿಟ್​​​ ಕಾಯಿನ್ ಪ್ರಕರಣವನ್ನು ಮರು ತನಿಖೆಗೆ ಆದೇಶಿಸಿದ್ದೇವೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಟ್​ ಕಾಯಿನ್​​ ತನಿಖೆಗೆ CID ಅಡಿಯಲ್ಲಿ SIT ರಚನೆ ಮಾಡಿದ್ದೇನೆ. ಸರ್ಕಾರದ ರಿಲೇಟೆಡ್ ಆದೇಶಗಳನ್ನ ಮಾಡ್ತೇವೆ.. ಟೆಕ್ನಿಕಲ್, ಅಂತರ ರಾಜ್ಯ, ಅಂತರ ರಾಷ್ಟ್ರ ಇರೋದ್ರಿಂದ ನಿಗದಿತ ಸಮಯದಲ್ಲಿ ಮುಗಿಯಲಿದೆ ಎಂದು ಹೇಳಲು ಬರಲ್ಲ ಎಂದರು.. ಇನ್ನು ಮಾಜಿ ಸಿಎಂ ಕುಮಾರಸ್ವಾಮಿ YST ಟ್ಯಾಕ್ಸ್ ಆರೋಪ ಮಾಡಿರುವುದಕ್ಕೆ ಪ್ರತಿಕ್ರಿಯಿಸಿದ್ರು, ನನಗೆ ಗೊತ್ತಿಲ್ಲ, ಅವರು ಯಾವ್ಯಾವುದೋ ST ಗಳನ್ನ ಹಾಕಿದ್ದಾರೆ.. ಅವರೇ ಹೇಳಿದ್ದಾರೆ, ದಿನವೂ ಸದನಕ್ಕೆ ಬರ್ತೀನಿ ಅಂತ, ಅವರನ್ನೇ ಕೇಳಿಕೊಳ್ಳಿ ಎಂದು ತಿರುಗೇಟು ನೀಡಿದ್ರು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ