ರಾಜ್ಯಕ್ಕೆ ಬಿಜೆಪಿ ಕೆಟ್ಟ ಹೆಸರು ತಂದಿದೆ- ಡಿಕೆಶಿ
ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ವಿರುದ್ಧ ದೊಡ್ಡ ಹೋರಾಟ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಹೇಳಿದರು.ರಾಜ್ಯಾದ್ಯಂತ ಬಂದ್ ಗೆ ಕರೆ ಕೊಟ್ಟ ವಿಚಾರವಾಗಿ ಮಾತನಾಡಿದ ಅವರು ರಾಜ್ಯಕ್ಕೆ ಕೆಟ್ಟ ಹೆಸರು ಬಿಜೆಪಿ ತಂದಿದೆ.ಅದನ್ನು ತೊಳೆಯುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಬೆಳಗಾವಿಯಿಂದ ಕಾಂಗ್ರೆಸ್ ಹೋರಾಟ ಮಾಡುತ್ತಿದೆ. ಗಾಂಧಿಜೀ ಬ್ರಿಟಿಷ್ ತೊಲಗಿ ಅಂತ ಹೋರಾಟ ಮಾಡಿದ್ರು, ಅದೆ ರೀತಿಯಲ್ಲಿ ಕಾಂಗ್ರೆಸ್ ಹೋರಾಟ ಮಾಡುತ್ತಿದೆ. ಮಾರ್ಚ್ ೯ ಬಂದ್ ಗೆ ಕರೆ ನೀಡಿದ್ದೇವೆ ಎಂದು ಹೇಳಿದರು. ಇನ್ನೂ ಸಚಿವ ನಾರಾಯಣ್ ಗೌಡ ಕಾಂಗ್ರೆಸ್ ಸೇರುವ ವಿಚಾರಕ್ಕೆ ಸ್ಥಳೀಯ ನಾಯಕರ ವಿರೋಧ ವಿಚಾರಕ್ಕೆ ಪ್ರತಿಕ್ರಿಯಿಸಿ ಕೆಸಿ ನಾರಾಯಣ್ ಗೌಡರು ನಮ್ಮ ಜೊತೆ ಮಾತಾಡಿಲ್ಲ ಬೇರೆಯವರು ಮತಾಡಿಲ್ಲ, ಯಾರಿಗೆ ಏನು ತೊಂದರೆ ಆಗಿದೆ ಎಂದು ಗೊತ್ತಿಲ್ಲ. ಅವೆಲ್ಲವೂ ನಾವು ಡೀಲ್ ಮಾಡಿಕೊಳ್ಳುತ್ತೇವೆ ಬಿಡಿ ಎಂದು ಹೇಳಿದರು.