ದೋಸ್ತಿ ಸರಕಾರ ಪತನಗೊಂಡು ಬಿಜೆಪಿ ಸರಕಾರ ರಚನೆಯಾಗಿ ತಿಂಗಳೇ ಕಳೆಯುತ್ತಿರುವಾಗ ಬಿಜೆಪಿಗೆ ಆರಂಭದಿಂದಲೂ ಆಂತರಿಕವಾಗಿದ್ದ ಭಿನ್ನಮತ ಇದೀಗ ಬಹಿರಂಗಗೊಳ್ಳುತ್ತಿದೆ.
ಮೈಸೂರು ದಸರಾದಲ್ಲಿ ಮೈಸೂರಿನವರೇ ಆಗಿರೋ ಶಾಸಕ ಹಾಗೂ ಮಾಜಿ ಸಚಿವ ಎ.ರಾಮದಾಸ್ ಎಲ್ಲ ಕಾರ್ಯಕ್ರಮಗಳಲ್ಲಿಯೂ ಪ್ರತಿ ಬಾರಿ ಮುಂದಾಗುತ್ತಿದ್ರು. ಆದರೆ ಈ ಸಲದ ದಸರಾದಲ್ಲಿ ಅವರು ಕಾಣಿಸಿಕೊಂಡಿಲ್ಲ.
ದಸರಾ ಹಬ್ಬದಲ್ಲಿ ಭಾಗವಹಿಸದೇ ಇರೋ ಮೂಲಕ ಸಚಿವ ಸ್ಥಾನ ದೊರಕದ ಸಿಟ್ಟು, ಅಸಮಧಾನವನ್ನು ಎ.ರಾಮದಾಸ್ ಹೊರಹಾಕಿದ್ದಾರೆ ಎನ್ನುವ ಚರ್ಚೆ ನಡೆಯುತ್ತಿದೆ.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಜಂಬೂ ಸವಾರಿ ಮಾಡೋ ಆನೆಗಳ ತಂಡಕ್ಕೆ ಪೂಜೆ ಸಲ್ಲಿಸಿದ್ರು.
ಬಿಜೆಪಿ ಶಾಸಕ ಎ.ರಾಮದಾಸ್ ಮೈಸೂರು ದಸರಾ ಸಮಾರಂಭಗಳಿಗೆ ಗೈರಾಗಿರೋದ್ರ ಹಿಂದೆ ಸಚಿವ ಸ್ಥಾನ ದೊರಕದ ಕಾರಣವೇ ಪ್ರಧಾನವಾಗಿದೆ ಎನ್ನಲಾಗುತ್ತಿದ್ದು, ಇದು ಕಮಲ ಪಾಳೆಯವನ್ನು ಕಂಗೆಡಿಸುತ್ತಿದೆ.