ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಏಕಾಏಕಿ 500, 1000 ರೂಪಾಯಿ ನೋಟ್ ಬ್ಯಾನ್ ಮಾಡಿರುವುದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಈಗಾಗಲೇ ಮಹಾರಾಷ್ಟ್ರ ಎಪಿಎಂಸಿ ಚುನಾವಣೆ ಹಾಗೂ ಗುಜರಾತ್ ಪುರಸಭೆ ಚುನಾವಣೆಯಲ್ಲಿ ಬಿಜೆಪಿ ತೀವ್ರ ಹಿನ್ನೆಡೆ ಅನುಭವಿಸಿದೆ. ಹೀಗೆ ಮುಂದುವರೆದಲ್ಲಿ ಸ್ವಚ್ಛ ಭಾರತದ ಬದಲಾಗಿ ಸ್ವಚ್ಛ ಬಿಜೆಪಿ ಆಗಲಿದೆ ಎಂದರು.
ಹೊಸದಾಗಿ ಬಂದಿರುವ 2000 ರೂಪಾಯಿ ನೋಟು ಮೇಲ್ನೋಟಕ್ಕೆ ಅಮೆರಿಕಾ ಡಾಲರ್‌ನಂತಿದೆ. ಪ್ರತಿ ವಿಚಾರಗಳಲ್ಲಿಯೂ ಪ್ರಧಾನಿ ಮೋದಿ ಅಮೆರಿಕ್‌ವನ್ನು ಅನುಕರಣೆ ಮಾಡುತ್ತಿದ್ದಾರೆ. ಆದರೆ, ಅದು ತಪ್ಪು. ನೋಟ್ ಬ್ಯಾನ್‌ನಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ನಿವಾರಿಸಲು ಆಗ್ರಹಿಸಿ ವಿಧಾನ ಪರಿಷತ್ ಕಲಾಪದಲ್ಲಿ ಪ್ರತಿಭಟನೆ ಕೈಗೊಳ್ಳಲಾಗುತ್ತದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವಾನ್ ಡಿಸೋಜಾ ಎಚ್ಚರಿಕೆ ನೀಡಿದರು.