'ಕೇಜ್ರಿವಾಲ್‌ಗೆ ನಿಮ್ಮ ಆಶೀರ್ವಾದರವಿರಲಿ': ವಾಟ್ಸಾಪ್ ಅಭಿಯಾನ ಶುರು ಮಾಡಿದ ಸುನೀತಾ ಕೇಜ್ರಿವಾಲ್

Sampriya

ಶುಕ್ರವಾರ, 29 ಮಾರ್ಚ್ 2024 (14:35 IST)
Photo Courtesy X
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಕಸ್ಟಡಿ ಅವಧಿಯನ್ನು ಏಪ್ರಿಲ್ 1ರ ವರೆಗೆ ವಿಸ್ತರಿಸಿದ ಬೆನ್ನಲ್ಲೇ ಪತ್ನಿ ಸುನೀತಾ ಕೇಜ್ರಿವಾಲ್ ಅವರು ವಾಟ್ಸಾಪ್ ಅಭಿಯಾನವನ್ನು ಶುರು ಮಾಡಿದ್ದಾರೆ.

ಈ ಬಗ್ಗೆ ವಿಡಿಯೋ ಹೇಳಿಕೆ ನೀಡಿರುವ ಅವರು,  'ಕೇಜ್ರಿವಾಲ್ ಎಂಬ ಶೀರ್ಷಿಕೆಯ ವಾಟ್ಸಾಪ್ ಅಭಿಯಾನವನ್ನು ಪ್ರಾರಂಭಿಸಿದ್ದೇವೆ. ಕೇಜ್ರಿವಾಲ್ ಕೋ ಆಶೀರ್ವಾದ್. ಈ ಸಂಖ್ಯೆಗೆ ನೀವು ನಿಮ್ಮ ಆಶೀರ್ವಾದ ಮತ್ತು ಪ್ರಾರ್ಥನೆಗಳನ್ನು ಕೇಜ್ರಿವಾಲ್‌ಗೆ ಕಳುಹಿಸಬಹುದು. ನಿಮಗೆ ಬೇಕಾದ ಸಂದೇಶವನ್ನು ಸಹ ನೀವು ಕಳುಹಿಸಬಹುದು" ಎಂದು ಹೇಳಿದರು.

ಕೇಜ್ರಿವಾಲ್ ಅವರು ತಮ್ಮ ನಿಲುವನ್ನು ನ್ಯಾಯಾಲಯದಲ್ಲಿ ಮಂಡಿಸಿದ್ದಾರೆ, ಅವರು ನಿಜವಾದ ದೇಶಭಕ್ತ. ಅವರ ಧಾಟಿಯಲ್ಲಿ ಪಕ್ಷಪಾತವಿದೆ. ಅರವಿಂದ್ ಅವರು ದೇಶದ ಅತ್ಯಂತ ಶಕ್ತಿಶಾಲಿ ಶಕ್ತಿಗಳಿಗೆ ಸವಾಲು ಹಾಕಿ ನಿಂತಿದ್ದಾರೆ. ಈ  ಹೋರಾಟದಲ್ಲಿ ನಿಮ್ಮ ಸಹೋದರನನ್ನು ಬೆಂಬಲಿಸುತ್ತೀರಲ್ಲವೇ  ಎಂದು ಹೇಳಿಕೊಂಡಿದ್ದಾರೆ.

ಮದ್ಯ ನೀತಿ ಹಗರಣ ಆರೋಪದಲ್ಲಿ ಜೈಲು ಪಾಲಾಗಿರುವ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಮತ್ತೆ ಹಿನ್ನಡೆಯಾಗಿದೆ. ಬಂಧನದಿಂದ ಮುಕ್ತಿ ಪಡೆಯುವ ನಿರೀಕ್ಷೆಯಲ್ಲಿದ್ದ ಅವರ ಜಾರಿ ನಿರ್ದೇಶನಾಲಯದ ವಶವನ್ನು ಏಪ್ರಿಲ್ 1ರವೆರೆಗೆ ಮತ್ತೆ ವಿಸ್ತರಿಸಿದೆ.

ಮಾರ್ಚ್ 15ರಂದು ನಡೆದ ಬಂಧನದಿಂದ ದಿಲ್ಲಿಯಲ್ಲಿನ ಇಡಿ ಕಚೇರಿಯ ಲಾಕಪ್‌ನಲ್ಲಿರುವ ಕೇಜ್ರಿವಾಲ್ ಅವರಿಗೆ ಗುರುವಾರವೂ ಬಿಡುಗಡೆ ಭಾಗ್ಯ ದೊರಕಿಲ್ಲ. ಕೇಜ್ರಿವಾಲ್ ಅವರನ್ನು ಏಪ್ರಿಲ್ 1ರ ಬೆಳಿಗ್ಗೆ 11.30ರ ವೇಳೆಗೆ ಕೇಜ್ರಿವಾಲ್ ಅವರನ್ನು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ