ಬಾಂಬರ್ ಆದಿತ್ಯ ರಾವ್ ಯಾವ ಟೆಕ್ನಾಲಜಿಯಿಂದ ಬಾಂಬ್ ತಯಾರಿಸಿದ್ದ ಗೊತ್ತಾ?
ಗುರುವಾರ, 23 ಜನವರಿ 2020 (12:50 IST)
ಮಂಗಳೂರಿನಲ್ಲಿ ಬಾಂಬ್ ಇಟ್ಟಿದ್ದ ಕೇಸ್ ನ ಆರೋಪಿ ಬಾಂಬರ್ ಆದಿತ್ಯ ರಾವ್ ಬಗ್ಗೆ ಸ್ಫೋಟಕ ಮಾಹಿತಿಗಳು ಹೊರಬೀಳುತ್ತಿವೆ.
ಆದಿತ್ಯರಾವ್ ವಿರುದ್ಧ ಮೂರು ಹುಸಿಬಾಂಬ್ ಕರೆ ಮಾಡಿರೋ ಕೇಸ್ ದಾಖಲಾಗಿವೆ. ಜೈಲಿನಲ್ಲಿ ವಿಮುಖನಾಗಿ ಮತ್ತಷ್ಟು ಕೃತ್ಯ ನಡೆಸಲು ಪ್ಲಾನ್ ನಡೆಸಿದ್ದನಂತೆ.
ತಂತ್ರಜ್ಞಾನದ ಬಗ್ಗೆ ಅತೀವ ಜ್ಞಾನ ಹೊಂದಿದ್ದ ಆದಿತ್ಯರಾವ್, ಯೂಟ್ಯೂಬ್ ಮೂಲಕ ಬಾಂಬ್ ತಯಾರಿಕೆ ಬಗ್ಗೆ ಮಾಹಿತಿ ಪಡೆಯುತ್ತಿದ್ದನು.
ಹಲವಾರು ತಿಂಗಳುಗಳ ಕಾಲ ಬಾಂಬ್ ತಯಾರಿ ಬಗ್ಗೆ ರಿಸರ್ಚ್ ಮಾಡಿದ್ದನು. ಕುಡ್ಲ ಹೊಟೇಲ್ ನಲ್ಲಿ ಡಿಸೆಂಬರ್ ನಲ್ಲಿ ಕೆಲಸಕ್ಕೆ ಸೇರಿದ್ದ ಆದಿತ್ಯರಾವ್ , ವಾರದ ರಜೆಗಳಲ್ಲಿ ಬಾಂಬ್ ತಯಾರಿಸುತ್ತಿದ್ದನು.
ಮಂಗಳೂರಿನ ಹೊಟೇಲ್ ಜಾಬ್ ಬಿಟ್ಟು ಕಾರ್ಕಳದಲ್ಲಿರುವ ಹೊಟೇಲ್ ನಲ್ಲಿ ಕೆಲಸಕ್ಕೆ ಸೇರಿದ್ದನು. ಕಾರ್ಕಳದಿಂದ ಬಜ್ಪೆ ಏರ್ ಪೋರ್ಟ್ ಗೆ ಬಂದಿಳಿದಿದ್ದನು. ಸಲೂನ್ ಗೂ ಕೂಡಾ ಹೋಗಿ ಬ್ಯಾಗ್ ಇಡಲು ಹೋಗಿದ್ದ. ಅಲ್ಲದೇ ಮೊದಲೇ ಏರ್ ಪೋರ್ಟ್ ಸುತ್ತಮುತ್ತಲಿನ ಸ್ಥಳದ ಬಗ್ಗೆ ಮಾಹಿತಿ ಪಡೆದಿದ್ದನು.
ಆದಿತ್ಯರಾವ್ ವಿರುದ್ಧ ಎರಡು ಗಂಭೀರ ಪ್ರಕರಣಗಳು ದಾಖಲಾಗಿವೆ. ಕೋರ್ಟ್ ಮುಂದೆ ಆರೋಪಿಯನ್ನು ಹಾಜರುಪಡಿಸಲಾಗುವುದು ಅಂತ ಮಂಗಳೂರು ಪೊಲೀಸ್ ಕಮಿಷನರ್ ಡಾ.ಪಿ.ಎಸ್.ಹರ್ಷ ಹೇಳಿದ್ದಾರೆ.