ಹಾಡುಹಗಲೇ ಯುವತಿಯ ಮೇಲೆ ತಲ್ವಾರ್ ನಿಂದ ದಾಳಿ ಮಾಡಿದ ಪಾಗಲ್ ಪ್ರೇಮಿ

ಸೋಮವಾರ, 21 ಡಿಸೆಂಬರ್ 2020 (12:05 IST)
ಹುಬ್ಬಳ್ಳಿ : ಹಾಡುಹಗಲೇ ಯುವತಿಯ ಮೇಲೆ ತಲ್ವಾರ್ ನಿಂದ ಪಾಗಲ್ ಪ್ರೇಮಿ ದಾಳಿ ಮಾಡಿದ ಘಟನೆ ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿ ನಡೆದಿದೆ.

ನಡುರಸ್ತೆಯಲ್ಲಿ, ಜನಜಂಗುಳಿ ಇರುವ ಪ್ರದೇಶದಲ್ಲಿ ಯುವತಿ ನಡೆದುಕೊಂಡು ಹೋಗುತ್ತಿದ್ದಾಗ ದಾರಿಯಲ್ಲಿ ಅಡ್ಡಹಾಕಿದ ಪಾಗಲ್ ಪ್ರೇಮಿ ತಲ್ವಾರ್ ನಿಂದ ಮನಬಂದಂತೆ 4 ಬಾರಿ ಹೊಡೆದಿದ್ದಾನೆ. ಯುವತಿ ಕಿರುಚಾಡಿದ್ದಕ್ಕೆ ಆತ ಅಲ್ಲಿಂದ ಪರಾರಿಯಾಗಿದ್ದಾನೆ.
ಯುವತಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ