ಪಟ್ಟಾಭಿಷೇಕದ ಬಳಿಕ ಮೊದಲ ಬಾರಿ ಭಾರತಕ್ಕೆ ಭೇಟಿ ನೀಡಿದ ಬ್ರಿಟನ್ ರಾಜ ಚಾಲ್ಸ್‌

sampriya

ಬುಧವಾರ, 30 ಅಕ್ಟೋಬರ್ 2024 (14:59 IST)
photo credit X
ಬೆಂಗಳೂರು: ಬ್ರಿಟನ್​ ರಾಜ, ಕಿಂಗ್ಸ್ ಮೂರನೇ​ ಚಾರ್ಲ್ಸ್​​ ಬೆಂಗಳೂರಿಗೆ ಭೇಟಿ ನೀಡಿದ್ದಾರೆ. ಇದೊಂದು ವೈಯಕ್ತಿಕ ಭೇಟಿಯಾಗಿದೆ.

ವೈದ್ಯಕೀಯ ಸೌಲಭ್ಯ ಪಡೆಯುವ ಉದ್ದೇಶದಿಂದ ಚಾರ್ಲ್ಸ್ ದಂಪತಿ ಆಗಮಿಸಿದ್ದಾರೆ. ವೈಟ್​ಫೀಲ್ಡ್​ ಬಳಿಯ ಆರೋಗ್ಯ ಕೇಂದ್ರದಲ್ಲೇ ಅವರು ನೆಲೆಸಿದ್ದಾರೆ.

ಕಳೆದ ವರ್ಷ ಮೇ 6ರಂದು ಬ್ರಿಟನ್ ರಾಜನಾಗಿ ಪಟ್ಟಾಭಿಷೇಕ ಮಾಡಿಕೊಂಡ ಬಳಿಕ ಚಾರ್ಲ್ಸ್​​, ಬೆಂಗಳೂರಿಗೆ ಇದೇ ಮೊದಲ ಬಾರಿ ಭೇಟಿ ನೀಡುತ್ತಿದ್ದಾರೆ. ರಾಜಕುಮಾರನ ಜೊತೆ ರಾಣಿ ಕ್ಯಾಮಿಲಾ ಕೂಡ ಆಗಮಿಸಿದ್ದಾರೆ.

ಮೂರು ದಿನದ ಪ್ರವಾಸ ಕೈಗೊಂಡಿರುವ ದಂಪತಿ ಹೋಲಿಸ್ಟಿಕ್​ ಕೇಂದ್ರಕ್ಕೆ ಭೇಟಿ ನೀಡಲಿದೆ. ಹೊಸ ಪುನರ್​​ಜೀವನ ನೀಡುವ ಈ ಚಿಕಿತ್ಸೆಯಲ್ಲಿ ಯೋಗ, ಧ್ಯಾನ ಸೇರಿದಂತೆ ಇತರ ಥೆರಪಿಗಳಿರಲಿವೆ.

ಈ ಹೋಲಿಸ್ಟಿಕ್​ ಕೇಂದ್ರಕ್ಕೆ ಕಿಂಗ್​ ಚಾರ್ಲ್ಸ್​​ ಈ ಹಿಂದೆ ಕೂಡ ಭೇಟಿ ನೀಡಿದ್ದರು. 30 ಎಕರೆ ವಿಸ್ತಿರ್ಣದ ಈ ಆರೋಗ್ಯ ಕೇಂದ್ರದಲ್ಲೇ 2019ರಲ್ಲಿ ತಮ್ಮ 71ನೇ ಜನ್ಮದಿನ ಆಚರಿಸಿಕೊಂಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ