ಆಡಿಯೋದಲ್ಲಿ ಮಾತನಾಡಿದ್ದು ನಾನೇ ಎಂದ BSY

ಭಾನುವಾರ, 10 ಫೆಬ್ರವರಿ 2019 (14:24 IST)
ಆಪರೇಷನ್ ಕಮಲ ಕುರಿತು ಆಡಿಯೋದಲ್ಲಿ ಮಾತನಾಡಿದ್ದು ನಾನೇ ಎಂದು BSY ಒಪ್ಪಿಕೊಂಡಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿಯದು ಥರ್ಡ್ ಕ್ಲಾಸ್ ರಾಜಕಾರಣ ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮೊನ್ನೆ ಬಿಡುಗಡೆ ಮಾಡಿದ್ದ ಆಡಿಯೋದಲ್ಲಿ ನಾನೇ ಮಾತನಾಡಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ಥರ್ಡ್ ಕ್ಲಾಸ್​ ರಾಜಕಾರಣ ಮಾಡುತ್ತಿದ್ದಾರೆ ಎಂದರು.

ಸಿಎಂ, ಗುರಮಠಕಲ್ ಶಾಸಕರ ಮಗನನ್ನು ನನ್ನ ಹತ್ತಿರ ಕಳುಹಿಸಿಕೊಟ್ಟು, ಆಪರೇಷನ್ ಕಮಲ ಕುರಿತು ಮಾತನಾಡುವಂತೆ ಅದನ್ನು ರಿಕೆರ್ಡಿಂಗ್ ಮಾಡಿಕೊಂಡು ಆರೋಪ ಮಾಡುವ ಮೂಲಕ‌ ಆಡಿಯೋವನ್ನು ತಮಗೆ ಬೇಕಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳುತಿದ್ದಾರೆ‌ ಎಂದು ಆರೋಪಿಸಿದರು.

ನನ್ನ ಬಳಿ ಶಾಸಕರ ಮಗ ಶರಣಗೌಡ ಬಂದಿದ್ದು ನಿಜ. ಕುಮಾರಸ್ವಾಮಿ ಕುತಂತ್ರ ಮಾಡಿ, ನನ್ನ ಬಳಿ ಶರಣಗೌಡ ಅವರನ್ನು ಕಳಿಸಿಕೊಟ್ಟಿದ್ದಾರೆ. ಇದು ಒಬ್ಬ ಮುಖ್ಯಮಂತ್ರಿ ಹುದ್ದೆಯಲ್ಲಿದ್ದುಕೊಂಡು ಮಾಡುವದು ಸರಿಯಲ್ಲ.
ಆಡಿಯೋದಲ್ಲಿರುವ ಕೆಲ‌ಸತ್ಯಗಳನ್ನು ಅವರು ಮರೆ ಮಾಚಿದ್ದಾರೆ ಎಂದರು.

ಇತ್ತೀಚೆಗೆ ಸ್ವತಃ ಪ್ರಜ್ವಲ್ ರೇವಣ್ಣ ಅವರೇ ನಮ್ಮದು ಸೂಟ್ ಕೇಸ್ ಸಂಸ್ಕೃತಿ. ಸೂಟ್ ಕೇಸ್ ಇಲ್ಲದೇ ಯಾವುದೇ ಕೆಲಸ ಆಗಲ್ಲ ಎಂದು ಹೇಳಿಕೆ ನೀಡಿದ್ದರು. ಈ ಬಗ್ಗೆ ನನ್ನ ಬಳಿಯೂ ದಾಖಲೆಗಳು ಇವೆ.  ಸೋಮವಾರ ಅವರ ಬಂಡವಾಳ ಬಯಲು ಮಾಡುವೆ ಎಂದು ಬಿ.ಎಸ್​ ಯಡಿಯೂರಪ್ಪ  ತಿಳಿಸಿದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ