ತಮಿಳುನಾಡಿಗೆ ಪ್ರತಿನಿತ್ಯ 1 ಟಿಎಂಸಿ ನೀರು ಹರಿಯಬಿಡಲು ನೀಡಿರುವ ತೀರ್ಪಿನ ವಿರುದ್ಧ ಈಗ ರಾಜ್ಯ ಸಿಡಿದೆದ್ದಿದೆ. ಇದಕ್ಕಾಗಿ ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ವ ಪಕ್ಷಗಳ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಬಿಜೆಪಿ, ಜೆಡಿಎಸ್ ನಾಯಕರೂ ಪಾಲ್ಗೊಂಡಿದ್ದರು.
ಆದರೆ ಕಳೆದ ಬಾರಿಯಂತೆ ಇಂಡಿ ಒಕ್ಕೂಟದ ಓಲೈಕೆಗಾಗಿ ಭಾಗಿದಾರ ಡಿಎಂಕೆ ತೃಪ್ತಿಪಡಿಸಲು ತಮಿಳುನಾಡಿಗೆ ಅವೈಜ್ಞಾನಿಕವಾಗಿ ನೀರು ಬಿಟ್ಟು ನಮ್ಮ ರೈತರ ಹಿತಾಸಕ್ತಿ ಬಲಿಕೊಟ್ಟರೆ ನಾವು ಕೈ ಕಟ್ಟಿ ಕೂರಲು ಸಾಧ್ಯವಿಲ್ಲ ಎಂಬ ಎಚ್ಚರಿಕೆಯೊಂದಿಗೆ ಕರ್ನಾಟಕ ಸರ್ಕಾರ ಕಾವೇರಿ ನದಿ ವಿಚಾರದಲ್ಲಿ ಕೈಗೊಳ್ಳುವ ರಾಜ್ಯದ ಪರವಾದ ಪ್ರಾಮಾಣಿಕ ನಿಲುವನ್ನು ಬಿಜೆಪಿ ಬೆಂಬಲಿಸುತ್ತದೆ ಎಂದಿದ್ದಾರೆ.