ದೇಶದ್ರೋಹಿ ಜಮೀರ್ ಇಟ್ಕೊಂಡು ಸಿದ್ದರಾಮಯ್ಯ ವಕ್ಫ್ ಆಟ ಆಡ್ತಿದ್ದಾರೆ: ಬಿವೈ ವಿಜಯೇಂದ್ರ

Krishnaveni K

ಸೋಮವಾರ, 4 ನವೆಂಬರ್ 2024 (13:23 IST)
ಬೆಂಗಳೂರು: ದೇಶದ್ರೋಹಿ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನಿಟ್ಟುಕೊಂಡು ಸಿಎಂ ಸಿದ್ದರಾಮಯ್ಯ ವಕ್ಫ್ ವಿಚಾರದಲ್ಲಿ ಆಟ ಆಡ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆರೋಪಿಸಿದ್ದಾರೆ.

ವಕ್ಫ್ ನೋಟಿಸ್ ವಿರೋಧಿಸಿ ಇಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿದೆ. ಪ್ರತಿಭಟನೆಯಲ್ಲಿ ಪಾಲ್ಗೊಂಡ ಬಿವೈ ವಿಜಯೇಂದ್ರ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ವಕ್ಫ್ ಸಚಿವ ಜಮೀರ್ ಅಹ್ಮದ್ ಜಿಲ್ಲೆ ಜಿಲ್ಲೆಗಳಿಗೂ ಪ್ರವಾಸ ಮಾಡಿ ಅಧಿಕಾರಿಗಳಿಂದ ಬಲವಂತವಾಗಿ ನೋಟಿಸ್ ಕೊಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಜಮೀರ್ ಅಹ್ಮದ್ ಒತ್ತಡಕ್ಕೆ ಅಧಿಕಾರಿಗಳು ರೈತರ ಜಮೀನುಗಳಿಗೆ ನೋಟಿಸ್ ಕೊಟ್ಟಿದ್ದಾರೆ. ಇದಕ್ಕೆ ಸಿಎಂ ಸಿದ್ದರಾಮಯ್ಯನವರ ಕುಮ್ಮಕ್ಕು ಇದೆ. ಈ ಆಟಗಳು ಬಹಳ ದಿನ ನಡೆಯಲ್ಲ. 1974 ರ ಕಾಯಿದೆಯನ್ನು ನೆಪ ಮಾಡಿಕೊಂಡು ಹಿಂದೆ 50 ವರ್ಷಗಳ ಕಾಲ ಯಾವುದೇ ಸರ್ಕಾರ ಮಾಡದ ಕೆಟ್ಟ ಕೆಲಸಕ್ಕೆ ಜಮೀರ್ ಅಹ್ಮದ್ ಕೈ ಹಾಕಿದ್ದಾರೆ ಎಂದು ವಿಜಯೇಂದ್ರ ಹೇಳಿದ್ದಾರೆ.

ವಕ್ಫ್ ನೋಟಿಸ್ ಹಿಂದೆ ಇಡೀ ಸರ್ಕಾರವೇ ಇದೆ. ಸಿದ್ದರಾಮಯ್ಯ ಕುಮ್ಮಕ್ಕಿನಿಂದ ಅಧಿಕಾರಿಗಳನ್ನು ಬೆದರಿಸಿ ಜಮೀರ್ ಅಹ್ಮದ್ ನೋಟಿಸ್ ಕೊಡಿಸಿದ್ದಾರೆ. 15 ಸಾವಿರ ಎಕರೆ ರೈತರ ಜಮೀನಿಗೆ ನೋಟಿಸ್ ನೀಡಿದ್ದಾರೆ. ಮಠ ಮಾನ್ಯಗಳ ಜಮೀನು ನಮ್ಮದು ಅಂತಿದ್ದಾರೆ. ನಾನು ಸಿದ್ದರಾಮಯ್ಯನವರಿಗೆ ಸವಾಲು ಹಾಕ್ತೇನೆ, ವಕ್ಫ್ ಆಸ್ತಿಯನ್ನು ಕಬಳಿಸಿರುವ ರಾಜಕೀಯ ಪುಡಾರಿಗಳು ನಿಮ್ಮ ಪಕ್ಷದಲ್ಲೇ ಇದ್ದಾರೆ. ತಾಕತ್ತಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಿ. ಬಿಜೆಪಿ ಒಂದಿಂಚು ಜಮೀನನ್ನೂ ವಕ್ಫ್ ಗೆ ಹೋಗಲು ಬಿಡಲ್ಲ. ಇದರ ವಿರುದ್ಧ ಹೋರಾಟ ಮುಂದುವರಿಸಲಿದ್ದೇವೆ’ ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ