ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಸಚಿವ ಸಂಪುಟದ ಪಟ್ಟಿ ಹೀಗಿದೆ

ಮಂಗಳವಾರ, 20 ಆಗಸ್ಟ್ 2019 (10:06 IST)
ಬೆಂಗಳೂರು : ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಸಚಿವ ಸಂಪುಟದ ಪಟ್ಟಿ ಬಿಡುಗಡೆಯಾಗಿದ್ದು, 17 ಮಂದಿ ಶಾಸಕರುಗಳು ಸಚಿವ ಸ್ಥಾನ ಪಡೆದುಕೊಂಡಿದ್ದಾರೆ.




ಸೋಮವಾರ ಕೇಂದ್ರ ಸಚಿವ ಅಮಿತ್ ಶಾ ಅವರು ಸಚಿವರ ಪಟ್ಟಿಯನ್ನು ತಯಾರು ಮಾಡಿಕೊಟ್ಟಿದ್ದು. ಆದರೆ ಕೊನೆ ಕ್ಷಣದಲ್ಲಿ ಸಿಎಂ ಯಡಿಯೂರಪ್ಪ ಅವರು ಬದಲಾವಣೆ ಮಾಡಿ ಇದೀಗ ಸಚಿವರ ಪಟ್ಟಿ ಬಿಡುಗಡೆ ಮಾಡಿದ್ದಾರೆ.


ಬಸವರಾಜ್ ಬೊಮ್ಮಾಯಿ (ಶಿಗ್ಗಾಂವಿ ಕ್ಷೇತ್ರ), ಬಿ. ಶ್ರೀರಾಮುಲು (ಮೊಳಕಾಲ್ಮೂರು ಕ್ಷೇತ್ರ), ಗೋವಿಂದ ಕಾರಜೋಳ (ಮುಧೋಳ ಕ್ಷೇತ್ರ), ನಾಗೇಶ್‌ (ಮುಳಬಾಗಿಲು ಕ್ಷೇತ್ರ), ಕೋಟಾ ಶ್ರೀನಿವಾಸ ಪೂಜಾರಿ (ಮೇಲ್ಮನೆ ಸದಸ್ಯ), ಶಶಿಕಲಾ ಜೊಲ್ಲೆ (ನಿಪ್ಪಾಣಿ ಕ್ಷೇತ್ರ), ಜಗದೀಶ್‌ ಶೆಟ್ಟರ್‌ (ಧಾರವಾಡ ಸೆಂಟ್ರಲ್‌ ಕ್ಷೇತ್ರ),‌ ವಿ. ಸೋಮಣ್ಣ (ಗೋವಿಂದರಾಜ ನಗರ ಕ್ಷೇತ್ರ), ಕೆ.ಎಸ್.‌ ಈಶ್ವರಪ್ಪ (ಶಿವಮೊಗ್ಗ ಕ್ಷೇತ್ರ), ಮಾಧುಸ್ವಾಮಿ (ಚಿಕ್ಕನಾಯಕನ ಹಳ್ಳಿ ಕ್ಷೇತ್ರ), ಆರ್.‌ ಅಶೋಕ್‌ (ಪದ್ಮನಾಭ ನಗರ ಕ್ಷೇತ್ರ), ಸುರೇಶ್‌ ಕುಮಾರ್‌ (ರಾಜಾಜಿ ನಗರ ಕ್ಷೇತ್ರ), ಅಶ್ವಥನಾರಾಯಣ (ಮಲ್ಲೇಶ್ವರಂ ಕ್ಷೇತ್ರ), ಸಿ.ಟಿ. ರವಿ (ಚಿಕ್ಕಮಗಳೂರು ಕ್ಷೇತ್ರ), ಪ್ರಭು ಚವ್ಹಾಣ್‌ (ಔರಾದ್‌ ಕ್ಷೇತ್ರ), ಸಿ.ಸಿ. ಪಾಟೀಲ್ (ನರಗುಂದ ಕ್ಷೇತ್ರ), ಲಕ್ಷ್ಮಣ್‌ ಸವದಿ ಅವರಿಗೆ ಸಚಿವ ಸ್ಥಾನ ಸಿಕ್ಕಿದ್ದು. ಇಂದು ಈ 17 ಮಂದಿ ಶಾಸಕರುಗಳು ರಾಜಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ