ಬೀದಿಗಿಳಿದ ಕೇಬಲ್ ಅಪರೇಟರ್ ಗಳು

ಶುಕ್ರವಾರ, 21 ಡಿಸೆಂಬರ್ 2018 (15:54 IST)
ಡಿಸೆಂಬರ್ 29ರಿಂದ ಜಾರಿಗೆ ಬರಲಿರುವ ಟ್ರಾಯ್ ಟ್ಯಾರೀಪ್ ಆ್ಯಕ್ಟ್ ವಿರೋಧಿಸಿ ಪ್ರತಿಭಟನೆ ನಡೆದಿದೆ.

ಬೆಂಗಳೂರು ಕೇಬಲ್ ಲಿಂಕ್ ಅಪರೇಟರ್ಸ್ ವೇಲ್ ಫೇರ್ ಅಸೋಸಿಯೇಷನ್ ವತಿಯಿಂದ ಪ್ರತಿಭಟನೆ ನಡೆಸಲಾಗಿದೆ.
ಹೊಸೂರು -ಬೆಂಗಳೂರು ಹೆದ್ದಾರಿಯ ಚಂದಾಪುರ ವೃತ್ತದಲ್ಲಿ ಪ್ರತಿಭಟನೆ ಮಾಡಲಾಯಿತು.

ಟ್ರಾಯ್ ಜನ ವಿರೋಧಿ ನೀತಿ ಅನುಸರಿಸುತ್ತಿದೆ. ಇದರಿಂದ ಜನಸಾಮಾನ್ಯನ ಮೇಲೆ ದರ ಹೆಚ್ಚಾಗುತ್ತದೆಂದು ಆಕ್ರೋಶ ವ್ಯಕ್ತಪಡಿಸಿ, ಟ್ರಾಯ್ ಪ್ರತಿಕೃತಿ ದಹಿಸಲಾಯಿತು.

300 ರಿಂದ 400 ಚಾನೆಲ್ ಗಳಿಗೆ 250 ರಿಂದ 300 ರೂಪಾಯಿಗಳನ್ನು ಸಂಗ್ರಹವಾಗುತಿತ್ತು. ಆದರೀಗ ಇದೇ ಚಾನೆಲ್ ಗಳಿಗೆ 1500 ರೂಪಾಯಿಗಳಿಗಿಂತ ಹಣ ವಸೂಲಿ ಮಾಡಿ ಇದೊಂದು ಹಗಲು ದರೋಡೆಯಾಗಲಿದೆಯೆಂದು ಕೇಬಲ್ ಅಪರೇಟರ್ ಗಳು ಆರೋಪಿಸಿದರು.

ಮೇಲ್ನೋಟಕ್ಕೆ 100ಚಾನೆಲ್ ಗಳು ಎಂದು ಹೇಳಿ, ಪ್ರತಿ ಚಾನೆಲ್ ಪ್ರತ್ಯೇಕ ಚಾನೆಲ್ ಗೆ ದರ ನಿಗದಿಪಡಿಸಿದೆ. ಇದು ಜನರ ಹಣ ಲೂಟಿ ಮಾಡುವ ಹುನ್ನಾರವೆಂದು ಆರೋಪ ಮಾಡಿದರು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ