ಯುವತಿಯರ ಜೊತೆ ಮೋಜಿಗಾಗಿ ಕಾರು ಕಳ್ಳತನ ಮಾಡುತ್ತಿದ್ದ ಖದೀಮ ಅರೆಸ್ಟ್

ಮಂಗಳವಾರ, 12 ಜುಲೈ 2022 (10:01 IST)
ಬೆಂಗಳೂರು: ಯುವತಿಯರ ಜೊತೆ ಮೋಜು ಮಸ್ತಿಗಾಗಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಕಾರು ಕಳ್ಳತನ ಮಾಡುತ್ತಿದ್ದ ಹೈಟೆಕ್ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.

ಅರುಣ್ ಕುಮಾರ್ ಎಂಬಾತ ಬಂಧಿತ ಆರೋಪಿ. ಈತ ಆಧುನಿಕ ತಂತ್ರಜ್ಞಾನದ ಟೂಲ್ ಕಿಟ್ ಖರೀದಿ ಮಾಡಿ ಯೂ ಟ್ಯೂಬ್ ನಲ್ಲಿ ಕಾರು ಕಳ್ಳತನ ಮಾಡಲು ತರಬೇತಿ ಪಡೆದಿದ್ದ. ಕಾರಿನ ಒಂದು ಬದಿಯ ಗಾಜು ಒಡೆದು ಕ್ಷಣಾರ್ಧದಲ್ಲಿ ಕಾರು ಕದ್ದು ಪರಾರಿಯಾಗುತ್ತಿದ್ದ.

ಈ ರೀತಿ ಕದ್ದ ಕಾರುಗಳನ್ನು ತಮಿಳುನಾಡಿನಲ್ಲಿ ಮಾರಾಟ ಮಾಡುತ್ತಿದ್ದ. ಇದೀಗ ಎಚ್ಎಸ್ ಆರ್ ಪೊಲೀಸರು ಈತನನ್ನು ಬಂಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ