ದೇವಾಲಯದೊಳಗೆ ಮದ್ಯ, ಮಾಂಸ ಸೇವಿಸಿದ್ದಕ್ಕೆ ಪೂಜಾರಿಯ ಕೊಲೆ

ಸೋಮವಾರ, 11 ಜುಲೈ 2022 (08:40 IST)
ಲಕ್ನೋ: ದೇವಾಲಯದೊಳಗೆ ಮದ್ಯ ಮಾಂಸ ತಂದು ಅಪವಿತ್ರಗೊಳಿಸಿದ್ದಕ್ಕೆ ಪೂಜಾರಿಯನ್ನು ಸ್ಥಳೀಯರಿಬ್ಬರು ಹೊಡೆದು ಕೊಲೆ ಮಾಡಿದ ಘಟನೆ ನಡೆದಿದೆ.

ಪೂಜಾರಿ ಕಾಣೆಯಾಗಿರುವ ಬಗ್ಗೆ ಪತ್ನಿ ದೂರು ನೀಡಿದ್ದಳು. ವಿಚಾರಣೆ ನಡೆಸಿದಾಗ ನಿರ್ಜನ ಪ್ರದೇಶದಲ್ಲಿ ಮೃತದೇಹವೂ ಪತ್ತೆಯಾಗಿದೆ. ಅದರಂತೆ ಪೊಲೀಸರು ಸಿಸಿಟಿವಿ ವಿಡಿಯೋ ಪರೀಕ್ಷಿಸಿದಾಗ ಸ್ಥಳೀಯರಿಬ್ಬರು ಹೊಡೆದು ಕೊಲೆ ಮಾಡಿರುವುದು ಪತ್ತೆಯಾಗಿದೆ.

ಹೀಗಾಗಿ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದ್ದು, ಪ್ರಕರಣ ತನಿಖೆ ನಡೆಸುತ್ತಿದ್ದಾರೆ. ಮದ್ಯ-ಮಾಂಸವನ್ನು ದೇವಾಲಯ ಪರಿಸರಕ್ಕೆ ತಂದಿದ್ದೇ ಈ ಘಟನೆಗೆ ಕಾರಣ ಎಂದು ವಿಚಾರಣೆಯಿಂದ ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ