ಸ್ನಾನ ಮಾಡುತ್ತಿದ್ದ ಮಗುವನ್ನು ನುಂಗಿದ ಮೊಸಳೆ! ಮುಂದೆ ಆಗಿದ್ದೇನು?
ಸ್ನಾನಕ್ಕೆಂದು ಬಂದು ನದಿ ದಡಕ್ಕೆ ಬಂದಿದ್ದ ಬಾಲಕನನ್ನು ಮೊಸಳೆ ನುಂಗಿದೆ. ಇದನ್ನು ನೋಡಿದ ಸ್ಥಳೀಯರು ತಕ್ಷಣವೇ ಬಾಲಕನ ಕುಟುಂಬಸ್ಥರಿಗೆ ವಿಷಯ ಮುಟ್ಟಿಸಿದ್ದಾರೆ. ಕುಟುಂಬಸ್ಥರು, ಗ್ರಾಮಸ್ಥರು ಸೇರಿಕೊಂಡು ಮೊಸಳೆಯನ್ನು ಹಿಡಿದು ದಡಕ್ಕೆ ತಂದಿದ್ದಾರೆ.
ಬಳಿಕ ಮೊಸಳೆ ಮಗುವನ್ನು ಹೊರ ಹಾಕುವುದನ್ನೇ ಕಾದಿದ್ದಾರೆ. ಈ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿ ಪೊಲೀಸರು, ಅಧಿಕಾರಿಗಳು ಗ್ರಾಮಸ್ಥರ ಮನ ಒಲಿಸಲು ಮುಂದಾಗಿದ್ದಾರೆ. ಆದರೆ ಮಗು ಇನ್ನೂ ಮೊಸಳೆಯ ಹೊಟ್ಟೆಯಲ್ಲಿ ಜೀವಂತವಾಗಿರಬಹುದು. ಅದು ಹೊರಹಾಕದ ಹೊರತು ಮೊಸಳೆಯನ್ನು ಬಿಡಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಕೊನೆಗೆ ಅವರ ಮನ ಒಲಿಸಿ ಮೊಸಳೆಯನ್ನು ಅವರ ಸೆರೆಯಿಂದ ಬಿಡಿಸಲಾಗಿದೆ.