ಬಿಜೆಪಿ ವಿರುದ್ಧ ‘ಕೊವಿಡ್’ ತನಿಖಾಸ್ತ್ರ ಪ್ರಯೋಗ

ಸೋಮವಾರ, 21 ಆಗಸ್ಟ್ 2023 (20:40 IST)
ಬಿಜೆಪಿ ಸರ್ಕಾರದ ಸಮಯದಲ್ಲಿ ಕೋವಿಡ್ 19 ಕಾಲದಲ್ಲಿ ನಡೆದಿರುವ ಸಾಮಗ್ರಿ, ಔಷಧಿ ಖರೀದಿ ಅಕ್ರಮದ ಬಗ್ಗೆ ನ್ಯಾ.ಜಾವೇದ್ ರಹೀಂ ನೇತೃತ್ವದಲ್ಲಿ ತನಿಖೆ ನಡೆಸಲು ಸರ್ಕಾರ ಮುಂದಾಗಿದೆ. ಕೋವಿಡ್-19 ನಿರ್ವಹಣೆ ವೇಳೆ ಖರೀದಿಸಿದ್ದ PPE ಕಿಟ್, ಸ್ಯಾನಿಟೈಸರ್, ವೆಂಟಿಲೇಟರ್, ಆಂಪೋಟರಿಸಿಯನ್, ಕೋವಿಡ್ ಲಸಿಕೆ, ಔಷಧ ಸಾಮಗ್ರಿ ಮತ್ತು ವೈದ್ಯಕೀಯ ಸಲಕರಣೆ, ಉಪಕರಣಗಳ ಖರೀದಿಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ಸರ್ಕಾರ ಮುಂದಾಗಿದೆ. ಹೈಕೋರ್ಟ್‌ ನಿವೃತ್ತ ನ್ಯಾಯಾಧೀಶ ಜಾವದ್ ರಹೀಂ ಅವರ ನೇತೃತ್ವದಲ್ಲಿ ನ್ಯಾಯಾಂಗ ತನಿಖಾ ಆಯೋಗ ರಚಿಸಲು ಸಿಎಂ ತೀರ್ಮಾನ ಮಾಡಿದ್ದಾರೆ. ಕಳೆದ‌ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಂಡಿದ್ದು, ಅದರಂತೆ ಸಿಎಂ ಸಿದ್ದರಾಮಯ್ಯ ನಿವೃತ್ತ ನ್ಯಾಯಮೂರ್ತಿಗಳ‌ ತನಿಖಾ ಆಯೋಗ ರಚಿಸಲು ತೀರ್ಮಾನಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ