ಬೆಂಗಳೂರು: ಇಂದು ಬೆಳಿಗ್ಗೆ 10 ಗಂಟೆಯಿಂದ ಬೆಂಗಳೂರಿನ ಈ ಏರಿಯಾದಲ್ಲಿ ವಿದ್ಯುತ್ ಇರುವುದಿಲ್ಲ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ. ಯಾವೆಲ್ಲಾ ಏರಿಯಾಗಳು ಇಲ್ಲಿದೆ ವಿವರ.
ತುರ್ತು ಕಾಮಗಾರಿ ನಿಮಿತ್ತ ಇಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಈ ಸಮಯದಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದು ಬೆಸ್ಕಾಂ ಮನವಿ ಮಾಡಿದೆ.
ಯಾವೆಲ್ಲಾ ಏರಿಯಾಗಳಲ್ಲಿ ಇರಲ್ಲ?
ಸೆಪ್ಟೆಂಬರ್ 27 ರಂದು ಅಂದರೆ ಇಂದು ಆರ್ ಎಂವಿ ಉಪಕೇಂದ್ರ ವ್ಯಾಪ್ತಿಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ರಾಮಯ್ಯ ಆಸ್ಪತ್ರೆ, ಪೈಪ್ ಲೈನ್ ರಸ್ತೆ, ಎಂಎಸ್ ಆರ್ ನಗರ, ಬಿಇಎಲ್ ರಸ್ತೆ, ಸಿಪಿಆರ್ ಐ ಕ್ವಾರ್ಟ್ಸ್, ಸದಾಶಿವನಗರ ಪೊಲೀಸ್ ಠಾಣೆ, ಎಜಿಎಸ್ ಲೇಔಟ್, ಜಲದರ್ಶಿನಿ ಲೇಔಟ್, ರಾಮಯ್ಯ ಬಾಲಕರ ಹಾಸ್ಟೆಲ್, ಎಕೆ ಕಾಲೊನಿ, ಶ್ರೀನಿಕೇತ್ ಅಪಾರ್ಟ್ ಮೆಂಟ್, ಕಾಫಿ ಡೇ, ಪಿಜ್ಜಾ ಹಟ್, ನಾರಾಯಣ ಪ್ರಸಾದ್ ಕಟ್ಟಡ, ಸೀನಪ್ಪ ಲೇಔಟ್, ಇಸ್ರೋ, ಡಾಲರ್ಸ್ ಕಾಲೊನಿ, ಚಿಕ್ಕಮಾರನಹಳ್ಳಿ, ಗೌರಿ ಅಪಾರ್ಟ್ ಮೆಂಟ್ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ.
ಈ ಸಮಯಕ್ಕೆ ಸರಿಯಾಗಿ ನಿಮ್ಮ ಕೆಲಸ ಕಾರ್ಯಗಳನ್ನು ಹೊಂದಾಣಿಕೆ ಮಾಡಿಕೊಳ್ಳಬಹುದು. ಇತ್ತೀಚೆಗಿನ ನವೀಕರಣ ಮತ್ತು ವಿದ್ಯುತ್ ವ್ಯತ್ಯಯದ ಮಾಹಿತಿಗಾಗಿ ಬೆಸ್ಕಾಂ ಅಧಿಕೃತ ವೆಬ್ ಸೈಟ್ ಅಥವಾ ಫೇಸ್ ಬುಕ್ ಪೇಜ್ ಗೆ ಭೇಟಿ ನೀಡಬಹುದು.