ಬೆಂಗಳೂರು ನಗರದ ಹಲವು ಶಾಲಾ ಮಕ್ಕಳ ಬ್ಯಾಗ್ ಗಳಲ್ಲಿ ಕಾಂಡೋಮ್ ಹಾಗೂ ಗರ್ಭ ನಿರೋಧಕ ಮಾತ್ರೆಗಳು ಸೇರಿದಂತೆ ಸಿಗರೇಟ್, ಲೈಟರ್, ಫೆವಿಕಾಲ್ ಮುಂತಾದ ವಸ್ತುಗಳು ಪತ್ತೆಯಾಗಿದೆ.9 ಮತ್ತು 10ನೇ ತರಗತಿ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಬ್ಯಾಗ್ ಗಳಲ್ಲಿ ಕಾಂಡೋಮ್, ಗರ್ಭ ನಿರೋಧಕ ಮಾತ್ರೆ ಪತ್ತೆಯಾಗಿದ್ದು,ಈ ಬಗ್ಗೆ ಎಚ್ಚರವಹಿಸುವಂತೆ ಶಾಲಾ ಆಡಳಿತ ಮಂಡಳಿಗಳಿಂದ ಪೋಷಕರಿಗೆ ಸೂಚನೆ ನೀಡಿದ್ದಾರೆ.
ನಗರದ ಕೆಲವು ಶಾಲೆಗಳಲ್ಲಿ 10 ದಿನಗಳ ಕಾಲ ರಜೆ ಘೋಷಿಸಿ ಕೌನ್ಸಿಲಿಂಗ್ ನೀಡುವಂತೆ ಸಲಹೆ ನೀಡಲಾಗಿದೆ.ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ಬಿಹೇವಿಯರ್ ನಲ್ಲಿ ಬದಲಾವಣೆ ಕಂಡು ಬಂದ ಹಿನ್ನೆಲೆ ಬ್ಯಾಗ್ ಪರಿಶೀಲನೆ ಮಾಡಲಾಗಿದೆ.ಆಗ ಶಾಲೆಯಲ್ಲಿ ಮೊಬೈಲ್ ಬಳಕೆ ನಿಷೇಧವಿದ್ದರೂ ಶಾಲೆಗೆ ಮೊಬೈಲ್ ಫೋನ್ ತರುತ್ತಿದ್ದ ವಿದ್ಯಾರ್ಥಿ, ವಿದ್ಯಾರ್ಥಿನಿಯರು.ಈ ಬಗ್ಗೆ ತಪಾಸಣೆಗೆ ಇಳಿದ ವೇಳೆ ಶಿಕ್ಷಕರಿಗೆ ಕಾಂಡೋಮ್, ಗರ್ಭ ನಿರೋಧಕ ಮಾತ್ರೆಗಳು ಪತ್ತೆಯಾಗಿದೆ.ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ತೆಗೆದುಕೊಳ್ಳುವಂತೆ ಶಾಲಾ ಶಿಕ್ಷಣ ಒಕ್ಕೂಟ ರುಪ್ಸಾ ಆಗ್ರಹ ಮಾಡಿದೆ.ಇಲ್ಲದಿದ್ದರೆ ಮುಂದಿನ ಪೀಳಿಗೆ ತಪ್ಪು ದಾರಿಗೆ ಹೋಗುವ ಆತಂಕವನ್ನ ಖಾಸಗಿ ಶಾಲಾ ಒಕ್ಕೂಟ ವ್ಯಕ್ತಪಡಿಸಿದೆ.