ರಮೇಶ್ ಜಾರಕಿಹೊಳಿ ಪ್ರಕರಣ: ಸಿಡಿ ಯುವತಿಯ ತಂದೆಯಿಂದ ಕಿಡ್ನ್ಯಾಪ್ ಕೇಸ್
ಮಾಧ್ಯಮಗಳಲ್ಲಿ ವಿಡಿಯೋ ನೋಡಿ ಮಗಳಿಗೆ ಕರೆ ಮಾಡಿದಾಗ ವಿಡಿಯೋದಲ್ಲಿರುವುದು ನಾನಲ್ಲ. ಎಡಿಟ್ ಮಾಡಿ ನನ್ನ ಮುಖ, ಧ್ವನಿ ಸೇರಿಸಲಾಗಿದೆ. ಅದು ನಕಲಿ ಎಂದು ಗೊತ್ತಾದ ಬಳಿಕ ಊರಿಗೆ ಬರುತ್ತೇನೆ ಎಂದಿದ್ದಳು. ಕರೆ ಮಾಡಿದಾಗ ಭಯದಿಂದ ಮಾತನಾಡುತ್ತಿದ್ದಳು. ನಾನು ಎಲ್ಲಿದ್ದೇನೆಂದೇ ಗೊತ್ತಿಲ್ಲ ಎಂದಿದ್ದಳು. ಇದನ್ನು ನೋಡಿದರೆ ಯಾರೋ ಆಕೆಯನ್ನು ಅಪಹರಿಸಿ ಒತ್ತಾಯಪೂರ್ವಕವಾಗಿ ವಿಡಿಯೋ ಮಾಡಿ ಬಿಡುತ್ತಿದ್ದಾರೆ ಎಂಬ ಅನುಮಾನವಿದೆ ಎಂದು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.