ಆಂಧ್ರಕ್ಕೆ 15ಸಾವಿರ ಕೋಟಿ ನೀಡಿದ ಕೇಂದ್ರ, ಕರ್ನಾಟಕಕ್ಕೆ ನೀಡಿದ್ದು ಚೊಂಬು: ದಿನೇಶ್ ಗುಂಡೂರಾವ್

Sampriya

ಮಂಗಳವಾರ, 23 ಜುಲೈ 2024 (19:15 IST)
Photo Courtesy X
ಬೆಂಗಳೂರು: ಕೇಂದ್ರ ಹಣಕಾಸು ಸಚಿವರ ಬಜೆಟ್ ಭಾಷಣದಲ್ಲಿ 'ಕರ್ನಾಟಕ'ದ ಪ್ರಸ್ತಾಪವೇ ಇಲ್ಲ. ಬಜೆಟ್'ನಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದೇನು ಎಂಬುದಕ್ಕೆ ಇದೇ ಸಾಕ್ಷಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಪ್ರತಿಕ್ರಿಯಿಸಿದ್ದಾರೆ.

ಇಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡು ಅಸಮಾಧಾನ ಹೊರಹಾಕಿದ್ದಾರೆ.

ಆಂಧ್ರಪ್ರದೇಶಕ್ಕೆ 15,000 ಕೋಟಿ, ಬಿಹಾರಕ್ಕೆ 26,000 ಕೋಟಿ ಪ್ಯಾಕೇಜ್. ಕರ್ನಾಟಕಕ್ಕೆ ಸಿಕ್ಕಿದ್ದು ಮಾತ್ರ 'ಚೊಂಬು'!

ರಾಜ್ಯಕ್ಕೆ ಯಾವ ಹೊಸ ಯೋಜನೆಗಳ ಪ್ರಸ್ತಾಪವೂ  ಇಲ್ಲ. ಹಳೆ ಯೋಜನೆಗಳಿಗೆ ಅನುದಾನವಿಲ್ಲ. ರಾಯಚೂರಿನಲ್ಲಿ ಸ್ಥಾಪನೆಯಾಗಬೇಕಿದ್ದ ಏಮ್ಸ್ ಮೆಡಿಕಲ್ ಕಾಲೇಜಿನ ಪ್ರಸ್ತಾಪವಿಲ್ಲ. ಒಟ್ಟಾರೆ ಕರ್ನಾಟಕದ ಬಗ್ಗೆ ಮಾತೇ ಇಲ್ಲ.

ಇನ್ನು ಉದ್ಯೋಗಿಗಳಿಗೆ ಆದಾಯ ತೆರಿಗೆ ವಿನಾಯಿತಿ ಇಲ್ಲ. ಬಡವರಿಗೆ ರೈತರಿಗೆ ಯಾವ ವಿಶೇಷ ಯೋಜನೆಗಳೂ ಇಲ್ಲ.

ಮೋದಿ ಸರ್ಕಾರದ ಬಜೆಟ್ ಎಂದಿನಂತೆ ಶ್ರೀಮಂತರ ಪರ ಹಾಗು ಬಡವರ, ತೆರಿಗೆ ಪಾವತಿದಾರರ ವಿರೋಧಿ ಬಜೆಟ್ ಆಗಿದೆ. ಸರ್ಕಾರವನ್ನು ಉಳಿಸಿಕೊಳ್ಳಲು ಮಿತ್ರಪಕ್ಷಗಳ ಓಲೈಕೆಗೆ ಸಾವಿರಾರು ಕೋಟಿ ಮೀಸಲಿಟ್ಟ ಬಜೆಟ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ