ಅಮುಲ್ ಗೆ ಕೇಂದ್ರ ಸರ್ಕಾರ ಉತ್ತೇಜನ ಕೊಡುತ್ತಿದೆ-ಸಿದ್ದರಾಮಯ್ಯ

ಭಾನುವಾರ, 9 ಏಪ್ರಿಲ್ 2023 (19:00 IST)
ಸಿಟಿ ರವಿ ಶೋಭಾ ಕರಂದ್ಲಾಜೆ ಅಮುಲ್ ಪರವಾಗಿ ಪರವಾಗಿ ಮಾತನಾಡಿದರೆ ಅವರಿಗೆ ಛೀಮಾರಿ ಹಾಕಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.ಈ ವಿಚಾರವಾಗಿ ನಗರದಲ್ಲಿ ಮಾತನಾಡಿದ ಅವರು ಈ ಸರ್ಕಾರ ಬಂದ ಮೇಲೆ ಸಹಕಾರ ಇಲಾಖೆಯನ್ನ ನಿರ್ಮಿಸಿದ್ದಾರೆ, ಅದು ರಾಜ್ಯದ ವಿಚಾರ ಈಗ ಎಲ್ಲಾ ರಾಜ್ಯಗಳಲ್ಲೂ ಮಿಲ್ಕ್ ಫೆಡರೇಶನ್‌ಗಳು ಆಗಿವೆ.ಗುಜರಾತ್ ನಲ್ಲಿ ಆನಂದ್ ಅಂತ ಇದೆ ರಾಜ್ಯದಲ್ಲಿ ಕೆಎಂಎಫ್ ಅಂತ ಇದೆ.ಆಯಾ ರಾಜ್ಯಗಳು ರೈತರನ್ನು ಸಂಘಟನೆ ಮಾಡಿ ಮಿಲ್ಕ್ ಸೊಸೈಟಿಗಳನ್ನ ಮಾಡಿದ್ದಾರೆ.ಅದರ ಮೂಲಕ ಹಾಲನ್ನ ಶೇಖರಣೆ ಮಾಡಿ, ಮಾರಾಟ ಮಾಡಬೇಕು ಅನ್ನೋದು ಉದ್ದೇಶ. 
ರೈತರಿಗೆ ಒಂದು ಉಪಕಸುಬು ನಿರ್ಮಾಣ ಮಾಡಬೇಕು.ಅವರ ಆದಾಯ ಹೆಚ್ಚು ಮಾಡಬೇಕು ಎಂಬ ತೀರ್ಮಾನ ಇದರಿಂದ ಕೈಗೊಳ್ಳಲಾಗಿದೆ. ಅಮೂಲ್ ಗುಜರಾತ್‌ನಲ್ಲಿ ಸೊಸೈಟಿ ಮಾಡಬೇಕು ಅಲ್ಲಿ ಮಾರುಕಟ್ಟೆ ಮಾಡಿ ಮಾಡಬೇಕು.ನಮ್ಮ ರಾಜ್ಯಕ್ಕೆ ಯಾಕೆ ಪ್ರವೇಶ ಆಗಬೇಕು.ಅದಕ್ಕೆ ಕೇಂದ್ರ ಸರ್ಕಾರ ಉತ್ತೇಜನ ಕೊಡುತ್ತಿದೆ.ಕನ್ನಡಿಗರು ಇದನ್ನ ವಿರೋಧಿಸಬೇಕು ಸಿಟಿ ರವಿ ಶೋಭಾ ಕರಂದ್ಲಾಜೆ ಅದರ ಪರವಾಗಿ ಮಾತನಾಡಿದರೆ ಅವರಿಗೆ ಛೀಮಾರಿ ಹಾಕಬೇಕು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ