ಬೆಂಗಳೂರಿನಲ್ಲೂ ನಡೆಯಲಿದೆಯಾ ಅಕ್ರಮ ವಲಸಿಗರ ಲೆಕ್ಕಾಚಾರ?

ಗುರುವಾರ, 16 ಆಗಸ್ಟ್ 2018 (08:46 IST)
ಬೆಂಗಳೂರು: ಇತ್ತೀಚೆಗೆ ಅಸ್ಸಾಂನಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದ್ದು ಭಾರೀ ಸುದ್ದಿಯಾಗಿತ್ತು. ಇದೀಗ ಬೆಂಗಳೂರಿನಲ್ಲೂ ಇಂತಹ ಅಕ್ರಮ ವಲಸಿಗರ ಪತ್ತೆಗೆ ಕೇಂದ್ರ ಕ್ರಮ ಕೈಗೊಳ್ಳಲಿದೆಯಾ?

ಮೊನ್ನೆಯಷ್ಟೇ ಬಿಜೆಪಿ ರಾಷ್ಟ್ರೀಯ ಅಧ‍್ಯಕ್ಷ ಮುಂದಿನ ಬಾರಿ ಅಧಿಕಾರಕ್ಕೆ ಬಂದರೆ ದೇಶದ ಎಲ್ಲಾ ಭಾಗದಲ್ಲೂ ಅಕ್ರಮ ವಲಸಿಗರ ಪತ್ತೆಗೆ ರಾಷ್ಟ್ರೀಯ ನೋಂದಣಿ ಕಾರ್ಯಕ್ರಮ ಮಾಡುತ್ತೇವೆ ಎಂದಿದ್ದರು.

ಇದೀಗ ಕೇಂದ್ರ ಗೃಹ ಇಲಾಖೆಯಿಂದ ರಾಜ್ಯ ಗೃಹ ಇಲಾಖೆಗೆ ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಪತ್ತೆಗೆ ಕಚೇರಿಯೊಂದನ್ನು ತೆರೆಯಲು ಸೂಚನೆ ಬಂದಿದೆ. ಬಿಜೆಪಿ ಸಂಸದ ಪಿಸಿ ಮೋಹನ್, ಅರವಿಂದ ಲಿಂಬಾವಳಿ ಈ ಬಗ್ಗೆ ಈ ಮೊದಲು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಗೆ ಮನವಿ ಮಾಡಿದ್ದರು.

ಇದರ ಬೆನ್ನಲ್ಲೇ ಕೇಂದ್ರ ಗೃಹ ಇಲಾಖೆಯಿಂದ ಈ ಸೂಚನೆ ಬಂದಿದೆ. ಬೆಂಗಳೂರಿನಲ್ಲೂ ಹಲವು ಅಕ್ರಮ ವಲಸಿಗರು ನೆಲೆಸಿದ್ದಾರೆ ಎಂದು ಹಲವು ವರದಿಗಳು ಹೇಳುತ್ತಲೇ ಬಂದಿವೆ. ಹೀಗಾಗಿ ಅಕ್ರಮ ವಲಸಿಗರ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಮೊದಲ ಹೆಜ್ಜೆಯಿಡುತ್ತಿದೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ