ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೈತಪ್ಪಿದ ಹಿನ್ನಲೆ; ಜೆಡಿಎಸ್ ನವರು ತಮ್ಮ ಕುಟುಂಬಕ್ಕೆ ಕೊಟ್ಟುಕೊಳ್ಳಲಿ - ಡಾ.ಕೆ.ಸುಧಾಕರ್

ಸೋಮವಾರ, 7 ಜನವರಿ 2019 (12:09 IST)
ಬೆಂಗಳೂರು : ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೈತಪ್ಪಿದ ಹಿನ್ನಲೆ ನಾನೇನು ಅದೇ ಬೇಕು ಎಂದು ಅರ್ಜಿ ಹಾಕಿರಲಿಲ್ಲ ಎಂದು ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್ ಅವರು ಹೇಳಿದ್ದಾರೆ.


ಈ ಬಗ್ಗೆ ಮಾತನಾಡಿದ ಅವರು,‘ನಮ್ಮ ಭಾಗದಲ್ಲಿ ಪಕ್ಷ ಬಲಿಷ್ಟಗೊಳಿಸಲು ಸಚಿವ ಸ್ಥಾನ ಕೇಳಿದೆ. ನಮ್ಮ ಹೈಕಮಾಂಡ್ ಈ ಬಗ್ಗೆ ಯೋಚಿಸಬೇಕು. ಪಾಪ ಜೆಡಿಎಸ್ ನವರು ತಮ್ಮ ಕುಟುಂಬಕ್ಕೆ ಕೊಟ್ಟುಕೊಳ್ಳಲಿ’ ಎಂದು ಹೇಳಿದ್ದಾರೆ.


‘ತಾಂತ್ರಿಕ ಕಾರಣಗಳನ್ನು ನೆಪವಾಗಿ ಇಟ್ಟುಕೊಳ್ಳುವುದು ಬೇಡ. ಅರ್ಹತೆಯ ಬಗ್ಗೆ ಯಾರು ಮಾತನಾಡಬೇಡಿ. SSLC ಪಾಸಾಗದಿರುವವರು ಎರಡೆರಡು ಖಾತೆ ನಿಭಾಯಿಸಿದಿದೆ. ಕೆಲ ಅಧಿಕಾರಿಗಳಿಗೆ ನಿವೃತ್ತಿ ನಂತರವೂ ಅಧಿಕಾರ ಬೇಕು. ಇದನೆಲ್ಲಾ ನಿಯಂತ್ರಿಸುವ ರಾಜಕೀಯ ಇಚ್ಚಾಶಕ್ತಿ ಬೇಕಷ್ಟೆ. ಇದು ಎಸ್.ಟಿ.ಸೋಮಶೇಖರ್, ಸುಬ್ಬಾರೆಡ್ಡಿ, ನನ್ನ ಪ್ರಶ್ನೆಯಲ್ಲ. ಇಲ್ಲಿ ಅವಮಾನ ಆಗಿರುವುದು ಡಾ.ಕೆ.ಸುಧಾಕರ್ ಗೆ ಅಲ್ಲ. ಇದು ರಾಹುಲ್ ಗಾಂಧಿ ಮುಂದಾಳತ್ವದಲ್ಲಿ ಆದ ಆಯ್ಕೆ. ಅವಮಾನ ಯಾರಿಗೆ ಆಗಿದೆ? ಹೈಕಮಾಂಡ್ ಮಾತಾಡಲಿ’ ಎಂದು  ಡಾ.ಕೆ.ಸುಧಾಕರ್ ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ