ಸಿಡ್ನಿ ಟೆಸ್ಟ್ ನಲ್ಲಿ ಕುಲದೀಪ್ ಯಾದವ್ ಮತ್ತು ಟೀಂ ಇಂಡಿಯಾ ಮಾಡಿದ ಆ ಅಪರೂಪದ ದಾಖಲೆ ಏನು ಗೊತ್ತಾ?!
ಸೋಮವಾರ, 7 ಜನವರಿ 2019 (09:21 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಕುಲದೀಪ್ ಯಾದವ್ 5 ವಿಕೆಟ್ ಗಳ ಗೊಂಚಲು ಪಡೆದರೆ, ಟೀಂ ಇಂಡಿಯಾ ಆಸೀಸ್ ಮೇಲೆ ಫಾಲೋ ಆನ್ ಹೇರಿದೆ.
ಈ ಎರಡೂ ವಿಚಾರಗಳು ಕ್ರಿಕೆಟ್ ಇತಿಹಾಸದಲ್ಲೇ ಅಪರೂಪವಾದುದು. ಕಳೆದ 33 ವರ್ಷಗಳ ಹಿಂದೆ ಭಾರತ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ನಲ್ಲಿ ಫಾಲೋ ಆನ್ ಹೇರಿತ್ತು. ಅದಾದ ಬಳಿಕ ಇದೇ ಮೊದಲ ಬಾರಿಗೆ ಫಾಲೋ ಆನ್ ಹೇರಿದೆ. ಅಂದರೆ ಕಳೆದ ಬಾರಿ ಫಾಲೋ ಆನ್ ಹೇರುವಾಗ ಇಂದಿನ ನಾಯಕ ವಿರಾಟ್ ಕೊಹ್ಲಿ ಇನ್ನೂ ಜನ್ಮ ತಾಳಿರಲಿಲ್ಲ!
ಇನ್ನು, 5 ವಿಕೆಟ್ ಪಡೆದ ಕುಲದೀಪ್ ಯಾದವ್ ಈ ಮೂಲಕ ಆಸೀಸ್ ನೆಲದಲ್ಲಿ 5 ವಿಕೆಟ್ ಕಿತ್ತ ಚಿನಾಮನ್ ಬೌಲರ್ ಎಂಬ ದಾಖಲೆ ಮಾಡಿದರು. ಇದಕ್ಕೂ ಮೊದಲು 64 ವರ್ಷಗಳ ಹಿಂದೆ ಇಂಗ್ಲೆಂಡ್ ನ ಜಾನಿ ವಾರ್ಡ್ಲೆ ಈ ದಾಖಲೆ ಮಾಡಿದ್ದರು. ಅದಾದ ಬಳಿಕ ಚಿನಾಮನ್ ಬೌಲರ್ ಒಬ್ಬರು ಆಸ್ಟ್ರೇಲಿಯಾದಲ್ಲಿ 5 ವಿಕೆಟ್ ಕಬಳಿಸುತ್ತಿರುವುದು ಇದೇ ಮೊದಲು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ