ಆಸ್ಟ್ರೇಲಿಯಾ ಸಂಸದೆಯಾಗಿ ಕೊಡಗಿನ ಚರಿಷ್ಮಾ ಪ್ರಮಾಣ ವಚನ ಸ್ವೀಕಾರ

ಶುಕ್ರವಾರ, 12 ಮೇ 2023 (17:07 IST)
ಮಡಿಕೇರಿ : ಪ್ರಪಂಚದಾದ್ಯಂತ ಭಾರತೀಯರು ಉದ್ಯೋಗ, ಅಧಿಕಾರದ ಚುಕ್ಕಾಣಿ ಹಿಡಿಯುವುದನ್ನು ನೋಡುತ್ತಿದ್ದೇವೆ. ವಿದೇಶಗಳಲ್ಲಿ ಸಾಮಾನ್ಯ ಉದ್ಯೋಗಿಯಿಂದ ಪ್ರಧಾನಿವರೆಗೂ ಭಾರತೀಯ ಮೂಲದವರನ್ನು ಕಾಣಬಹುದು.

ಅದೇ ಸಾಲಿನಲ್ಲಿ ಇದೀಗ ಕೊಡಗಿನ ಕುವರಿ ಆಸ್ಟ್ರೇಲಿಯಾದ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ವಿದೇಶದಲ್ಲಿ ಸಂಸದೆಯಾಗಿರುವ ಚರಿಷ್ಮಾ ಅವರು ಕೊಡಗು ಮೂಲದವರು. ಕೊಡಗಿನ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ಗಮನ ಸೆಳೆದಿದ್ದಾರೆ. 

ವಿದೇಶದಲ್ಲಿ ಕರುನಾಡ ಸಾಂಪ್ರದಾಯಿಕ ಉಡುಗೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿರುವುದು ಎಲ್ಲರ ಕಣ್ಮನ ಸೆಳೆಯುತ್ತಿದೆ. ಮೂಲತಃ ಮಡಿಕೇರಿ ತಾಲೂಕಿನ ನಾಪೋಕ್ಲು ಗ್ರಾಮದ ಕಲಿಯಂಡ ಚರಿಷ್ಮಾ ಆಸ್ಟ್ರೇಲಿಯಾದ ಲಿವರ್ ಪೂಲ್ ಕ್ಷೇತ್ರದಿಂದ ಸ್ಪರ್ಧಿಸಿ ಸಂಸತ್ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ