ಭಾರತ-ಆಸ್ಟ್ರೇಲಿಯಾ ಪಂದ್ಯಕ್ಕೆ ಧೋನಿ ಹಾಜರಿ

ಬುಧವಾರ, 22 ಮಾರ್ಚ್ 2023 (09:00 IST)
Photo Courtesy: Twitter
ಚೆನ್ನೈ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇಂದು ನಡೆಯಲಿರುವ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯಕ್ಕೆ ಮಾಜಿ ನಾಯಕ ಎಂ.ಎಸ್.ಧೋನಿ ಆಗಮಿಸಲಿದ್ದಾರೆ.

ಧೋನಿ ಐಪಿಎಲ್ 2023 ಕ್ಕಾಗಿ ಚೆನ್ನೈನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಆಟಕ್ಕೆ ಮೊದಲು ಟೀಂ ಇಂಡಿಯಾ ಕ್ರಿಕೆಟಿಗರನ್ನು ಧೋನಿ ಭೇಟಿಯಾಗಿದ್ದಾರೆ.

ಇಂದಿನ ಪಂದ್ಯದ ವೇಳೆಯೂ ಧೋನಿ ಮೈದಾನದಲ್ಲಿದ್ದು ಖುದ್ದಾಗಿ ಪಂದ್ಯ ವೀಕ್ಷಿಸಲಿದ್ದಾರೆ ಎನ್ನಲಾಗಿದೆ. ಧೋನಿ ಉಪಸ್ಥಿತಿ ಟೀಂ ಇಂಡಿಯಾ ಆಟಗಾರರಲ್ಲಿ ವಿಶೇಷ ಹುರುಪು ತರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ