ಭಾರತ-ಆಸ್ಟ್ರೇಲಿಯಾ ಏಕದಿನ: ಟೀಂ ಇಂಡಿಯಾಗೆ ಗೆಲ್ಲಲು 270 ರನ್ ಟಾರ್ಗೆಟ್

ಬುಧವಾರ, 22 ಮಾರ್ಚ್ 2023 (17:25 IST)
Photo Courtesy: Twitter
ಚೆನ್ನೈ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಮತ್ತು ನಿರ್ಣಾಯಕ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡಿ 269 ರನ್ ಗಳಿಸಿ ಆಲೌಟ್ ಆಗಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಆಸೀಸ್ ಗೆ ಮಿಚೆಲ್ ಮಾರ್ಷಲ್ ಮತ್ತು ಟ್ರಾವಿಸ್ ಹೆಡ್ ಉತ್ತಮ ಆರಂಭ ನೀಡಿದರು. ಆದರೆ ಬಳಿಕ ಹಾರ್ದಿಕ್ ಪಾಂಡ್ಯ ಸತತವಾಗಿ 3 ವಿಕೆಟ್ ಕಬಳಿಸಿ ಆಸೀಸ್ ಹಿನ್ನಡೆಗೆ ಕಾರಣರಾದರು. ಸ್ಟೀವ್ ಸ್ಮಿತ್ ಶೂನ್ಯಕ್ಕೆ ಔಟಾದರು.

ಬಳಿಕ ಎಲ್ಲಾ ಬ್ಯಾಟಿಗರು ಉತ್ತಮ ಆರಂಭ ಪಡೆದರೂ ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸಲು ವಿಫಲರಾದರು. ಹಾರ್ದಿಕ್ ಗೆ ಸಾಥ್ ನೀಡಿದ ಕುಲದೀಪ್ ಯಾದವ್ ಕೂಡಾ 3 ವಿಕೆಟ್ ಕಬಳಿಸಿ ಮಿಂಚಿದರು. ಉಳಿದಂತೆ ಅಕ್ಸರ್ ಪಟೇಲ್ 2, ಮೊಹಮ್ಮದ್ ಸಿರಾಜ್ 1 ವಿಕೆಟ್ ಕಬಳಿಸಿದರು. ಜಡೇಜಾ, ಮೊಹಮ್ಮದ್ ಶಮಿ ವಿಕೆಟ್ ಗಳಿಸಲು ವಿಫಲರಾದರು. ಇದೀಗ ಭಾರತ ಗೆಲ್ಲಲು 270 ರನ್ ಗಳಿಸಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ