ಸಚಿನ್ ತೆಂಡುಲ್ಕರ್ ಹುಟ್ಟುಹಬ್ಬಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾದಿಂದ ವಿಶೇಷ ಉಡುಗೊರೆ

ಸೋಮವಾರ, 24 ಏಪ್ರಿಲ್ 2023 (18:42 IST)
Photo Courtesy: Twitter
ಸಿಡ್ನಿ: ವಿಶ್ವಕ್ರಿಕೆಟ್ ನ ದೊರೆ ಸಚಿನ್ ತೆಂಡುಲ್ಕರ್ 50 ನೇ ಜನ್ಮದಿನ ಪ್ರಯುಕ್ತ ಇಂದು ಕ್ರಿಕೆಟ್ ಆಸ್ಟ್ರೇಲಿಯಾ ಅಭಿಮಾನಿಗಳಿಗೆ ವಿಶೇಷ ಉಡುಗೊರೆ ನೀಡಿದೆ.

ಸಚಿನ್ ಮತ್ತು ವೆಸ್ಟ್ ಇಂಡೀಸ್ ‍ಬ್ರಿಯಾನ್ ಲಾರಾ ಸಮಕಾಲೀನ ಶ್ರೇಷ್ಠ ಕ್ರಿಕೆಟಿಗರು. ಇವರಿಬ್ಬರ ಗೌರವಾರ್ಥ ಕ್ರಿಕೆಟ್ ಆಸ್ಟ್ರೇಲಿಯಾ ಸಿಡ್ನಿ ಕ್ರಿಕೆಟ್ ಮೈದಾನದ ಮುಖ್ಯ ದ್ವಾರಕ್ಕೆ ಈ ದಿಗ್ಗಜರ ಹೆಸರಿಟ್ಟು ಗೌರವಿಸಿದೆ.

ಯಾವುದೇ ಆಟಗಾರ ಮೈದಾನ ಪ್ರವೇಶಿಸಬೇಕೆಂದರೆ ಈ ಗೇಟ್ ದಾಟಿಯೇ ಪ್ರವೇಶಿಸಬೇಕು. ಈ ಗೇಟ್ ನ ಮೇಲೆ ಇಬ್ಬರ ಹೆಸರು ಮತ್ತು ಅವರು ಮಾಡಿರುವ ದಾಖಲೆಗಳ ವಿವರಗಳನ್ನು ಬರೆಯಲಾಗಿದೆ. ಈ ವಿಶೇಷ ಉಡುಗೊರೆ ಸಚಿನ್ ಮತ್ತು ಲಾರಾ ಇಬ್ಬರೂ ಕ್ರಿಕೆಟ್ ಆಸ್ಟ್ರೇಲಿಯಾಗೆ ಧನ್ಯವಾದ ಸಲ್ಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ