ಅಲ್ಲೂ ಪೆನ್ ಡ್ರೈವ್, ಇಲ್ಲೂ ಪೆನ್ ಡ್ರೈವ್: ವಾಲ್ಮೀಕಿ ನಿಗಮ ಅಧೀಕ್ಷಕ ಚಂದ್ರಶೇಖರ್ ಕೇಸ್ ನಲ್ಲೂ ಪೆನ್ ಡ್ರೈವ್
ಅವ್ಯವಹಾರ ಮತ್ತು ರಾಜಕೀಯ ಒತ್ತಡಗಳಿಂದಾಗಿ ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಪ್ರಕರಣ ರಾಜಕೀಯವಾಗಿ ಭಾರೀ ಬಿರುಗಾಳಿ ಎಬ್ಬಿಸಿದೆ. ಈ ವಿಚಾರದಲ್ಲಿ ಸಚಿವ ನಾಗೇಂದ್ರ ಕೈವಾಡವೂ ಇದೆ ಎಂದು ಆರೋಪ ಕೇಳಿಬಂದಿದೆ.
ಈ ನಡುವೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಚಂದ್ರಶೇಖರ್ ಮನೆಯಲ್ಲಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಪದ್ಮನಾಭ್ ಎಂದು ಹೆಸರು ಬರೆದಿದ್ದ ಪೆನ್ ಡ್ರೈವ್ ಸಿಕ್ಕಿದೆ. ಈ ಪೆನ್ ಡ್ರೈವ್ ನಲ್ಲಿ ಅವ್ಯವಹಾರದ ಮಾಹಿತಿಯಿರಬಹುದು ಎನ್ನಲಾಗಿದೆ. ಆದರೆ ನಿಜವಾಗಿ ಈ ಪೆನ್ ಡ್ರೈವ್ ನಲ್ಲಿ ಏನಿದೆ ಎನ್ನುವುದು ಗುಟ್ಟಾಗಿಯೇ ಇದೆ. ಪೆನ್ ಡ್ರೈವ್ ನಲ್ಲಿ ಏನಿದೆ ಎಂಬುದು ನಮಗೂ ಗೊತ್ತಾಗಬೇಕು ಎಂದು ಚಂದ್ರಶೇಖರ್ ಪತ್ನಿ ಆಗ್ರಹಿಸಿದ್ದಾರೆ. ಈ ಮೂಲಕ ಪ್ರಜ್ವಲ್ ಪ್ರಕರಣದಲ್ಲಿ ಕೇಳಿಬಂದಿದ್ದ ಪೆನ್ ಡ್ರೈವ್ ವಿಚಾರ ಈ ಪ್ರಕರಣದಲ್ಲೂ ಭಾರೀ ಕೋಲಾಹಲವನ್ನೆಬ್ಬಿಸುವ ಸಾಧ್ಯತೆಯಿದೆ.