ಬೆಂಗಳೂರು: ರೇವ್ ಪಾರ್ಟಿ ಕೇಸ್ ನಲ್ಲಿ ಸಿಲುಕಿಕೊಂಡಿರುವ ತೆಲುಗು ನಟಿ ಹೇಮಾ ಸಿಸಿಬಿ ಎದುರು ವಿಚಾರಣೆಗೆ ಹಾಜರಾಗದೇ ನಕರಾ ಮಾಡ್ತಿದ್ದಾರೆ.
ಬೆಂಗಳೂರಿನ ಜಿಆರ್ ಫಾರ್ಮ್ ಹೌಸ್ ನಲ್ಲಿ ನಡೆದಿದ್ದ ರೇವ್ ಪಾರ್ಟಿಯಲ್ಲಿ ಡ್ರಗ್ಸ್ ಕೂಡಾ ಸರಬರಾಜಾಗಿತ್ತು. ಪಾರ್ಟಿಯಲ್ಲಿ ಭಾಗವಹಿಸಿದ್ದ ಎಲ್ಲರನ್ನೂ ರಕ್ತ ಪರೀಕ್ಷೆ ನಡೆಸಿ ಡ್ರಗ್ಸ್ ಸೇವನೆ ಮಾಡಿರುವ ಬಗ್ಗೆ ಖಚಿತಪಡಿಸಲಾಗಿತ್ತು.
ಈ ಪೈಕಿ ತೆಲುಗು ನಟಿ ಹೇಮಾ ಕೂಡಾ ಸೇರಿದ್ದರು. ಹೇಮಾ ಪರೀಕ್ಷಾ ವರದಿಯೂ ಪಾಸಿಟಿವ್ ಬಂದಿದ್ದು, ಡ್ರಗ್ಸ್ ತೆಗೆದುಕೊಂಡಿದ್ದು ಕನ್ ಫರ್ಮ್ ಆಗಿತ್ತು. ಈ ಬಗ್ಗೆ ವಿಚಾರಣೆಗೆ ಹಾಜಾರಲು ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ.
ಆದರೆ ಹೇಮಾ ತಮ್ಮ ಪರಿಚಯದ ಆಂಧ್ರ ಮೂಲದ ರಾಜಕಾರಣಿಗಳ ಮೂಲಕ ಒತ್ತಡ ಹೇರುತ್ತಿರುವುದಲ್ಲದೆ, ಆರೋಗ್ಯದ ನೆಪ ಹೇಳಿ ವಿಚಾರಣೆಗೆ ಹಾಜರಾಗದೇ ತಪ್ಪಿಸಿಕೊಳ್ಳುತ್ತಿದ್ದಾರೆ. ಇದೀಗ ತಮಗೆ ಆರೋಗ್ಯ ಸರಿ ಇಲ್ಲ, ವಿಚಾರಣೆಗೆ ಹಾಜರಾಗಲು ಒಂದು ವಾರ ಕಾಲಾವಕಾಶ ನೀಡಿ ಎಂದು ಕೇಳಿಕೊಂಡಿದ್ದಾರೆ.