ಸುಮಲತಾ ಬಗ್ಗೆ ರೇವಣ್ಣ ವಿವಾದಾತ್ಮಕ ಹೇಳಿಕೆ ಬಳಿಕ ಸಿಎಂ ಎಚ್ ಡಿಕೆ ಜೆಡಿಎಸ್ ನಾಯಕರಿಗೆ ಖಡಕ್ ವಾರ್ನಿಂಗ್!
ಸುಮಲತಾ ಸ್ಪರ್ಧೆ ತಮ್ಮ ಪಕ್ಷದ ನಾಯಕರು ಬಾಯಿಗೆ ಬಂದಂತೆ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಸ್ವತಃ ಸಿಎಂ ಸೂಚಿಸಿದ್ದಾರೆ. ಇದರಿಂದ ಪಕ್ಷಕ್ಕೆ ಡ್ಯಾಮೇಜ್ ಆಗುತ್ತದೆ. ಮಂಡ್ಯದ ಜನರ ನಾಡಿಮಿಡಿತ ನಮಗೆ ಗೊತ್ತಿದೆ. ಇಲ್ಲಿ ನಮಗೆ ಆಶೀರ್ವಾದ ನೀಡುತ್ತಾರೆ ಎಂದು ವಿಶ್ವಾಸವಿದೆ. ಹೀಗಿರುವಾಗ ನಮ್ಮ ಪಕ್ಷದ ನಾಯಕರು ಸುಮಲತಾ ಬಗ್ಗೆ ನಾಲಿಗೆ ಹರಿಯಬಿಡುವುದು ಬೇಕಿಲ್ಲ ಎಂದು ಕುಮಾರಸ್ವಾಮಿ ವಾರ್ನಿಂಗ್ ಮಾಡಿದ್ದಾರೆ.