ಪಾಕಿಸ್ತಾನ ಜೊತೆ ಯುದ್ಧ ಬೇಡ ಅಂತ ಹೇಳಿಲ್ಲ: ವಿವಾದವಾಗುತ್ತಿದ್ದಂತೇ ಉಲ್ಟಾ ಹೊಡೆದ ಸಿಎಂ ಸಿದ್ದರಾಮಯ್ಯ

Krishnaveni K

ಭಾನುವಾರ, 27 ಏಪ್ರಿಲ್ 2025 (13:22 IST)
ಬೆಂಗಳೂರು: ಪಹಲ್ಗಾಮ್ ನಲ್ಲಿ ಅಮಾಯಕ ಭಾರತೀಯರ ಮೇಲೆ ಉಗ್ರರು ದಾಳಿ ನಡೆಸಿದ ಬಳಿಕ ಪಾಕಿಸ್ತಾನದ ಜೊತೆ ಯುದ್ಧ ಮಾಡಬೇಕಾ ಎಂಬ ಪ್ರಶ್ನೆಗೆ ಬೇಡ ಎಂದಿದ್ದ ಸಿಎಂ ಸಿದ್ದರಾಮಯ್ಯ ವಿವಾದವಾಗುತ್ತಿದ್ದಂತೇ ಉಲ್ಟಾ ಹೊಡೆದಿದ್ದಾರೆ.

ನಿನ್ನೆ ಮಾಧ್ಯಮಗಳು ಪಾಕಿಸ್ತಾನ ಜೊತೆ ಯುದ್ಧ ಮಾಡಬೇಕಾ ಎಂದು ಕೇಳಿದಾಗ ಯುದ್ಧ ಬೇಕಾಗಿಲ್ಲ. ನಾವು ಶಾಂತಿ ಪ್ರಿಯರು. ರಾಜತಾಂತ್ರಿಕವಾಗಿ ಕ್ರಮ ಕೈಗೊಳ್ಳಲಿ. ಭದ್ರತೆ ಹೆಚ್ಚಿಸಲಿ ಎಂದಿದ್ದರು. ಅವರ ಹೇಳಿಕೆ ಪಾಕಿಸ್ತಾನ ಮಾಧ್ಯಮಗಳಲ್ಲೂ ಪ್ರಸಾರವಾಗಿತ್ತು.

ಸಿದ್ದರಾಮಯ್ಯ ಯುದ್ಧ ಬೇಡ ಎಂದು ಹೇಳಿಕೆ ನೀಡಿದ್ದನ್ನು ಬಿಜೆಪಿ ನಾಯಕರು ಖಂಡಿಸಿದ್ದರು. ದೇಶವೇ ಆಕ್ರೋಶದಲ್ಲಿರುವಾಗ ಸಿದ್ದರಾಮಯ್ಯ ಮಾತ್ರ ಪಾಕಿಸ್ತಾನ ಮುಸ್ಲಿಮರನ್ನೂ ಓಲೈಸಲು ಮುಂದಾಗಿದ್ದಾರೆ ಎಂದು ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದರು.

ತಮ್ಮ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗುತ್ತಿದ್ದಂತೇ ಇದೀಗ ಸ್ಪಷ್ಟನೆ ನೀಡಿರುವ ಸಿಎಂ ಸಿದ್ದರಾಮಯ್ಯ ‘ಯುದ್ಧ ಬೇಡ ಅಂತ ಹೇಳಿಲ್ಲ. ಅನಿವಾರ್ಯವಾದರೆ ಯುದ್ಧ ಮಾಡಲಿ. ಇಲ್ಲವೇ ಶಾಂತಿ ಮಾರ್ಗದಲ್ಲಿ ಕ್ರಮ ಕೈಗೊಳ್ಳಲಿ ಎಂದು ಹೇಳಿದ್ದೆನಷ್ಟೇ’ ಎಂದು ಸ್ಪಷ್ಟನೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ