PM Modi Man Ki Bath: ಪಹಲ್ಗಾಮ್ ಸಂತ್ರಸ್ತರಿಗೆ ನ್ಯಾಯ ದೊರಕಿಸಿಯೇ ಸಿದ್ಧ: ಪ್ರಧಾನಿ ಮೋದಿ
ಇಂದು ಮನ್ ಕೀ ಬಾತ್ ನಲ್ಲಿ ಮಾತನಾಡಿದ ಪ್ರಧಾನಿ ಮೋದಿ ಪಹಲ್ಗಾಮ್ ಉಗ್ರ ದಾಳಿಯ ಬಗ್ಗೆ ಮತ್ತೊಮ್ಮೆ ರೋಷಾವೇಷದಿಂದ ಮಾತನಾಡಿದ್ದಾರೆ. ದಾಳಿ ಮಾಡಿದವರಿಗೆ, ಸಂಚು ರೂಪಿಸಿದವರಿಗೆ, ಸಹಾಯ ಮಾಡಿದವರಿಗೆ ಪ್ರತಿಯೊಬ್ಬರಿಗೂ ತಕ್ಕ ಶಿಕ್ಷೆ ಕೊಟ್ಟೇ ಕೊಡುತ್ತೇವೆ ಎಂದಿದ್ದಾರೆ.
ಪಹಲ್ಗಾಮ್ ನಲ್ಲಿ ಬಲಿಯಾದ ಅಮಾಯಕರ ಬಗ್ಗೆ ಹೃದಯಲ್ಲಿ ಈಗಲೂ ನೋವಿದೆ. ಘಟನೆ ಬಗ್ಗೆ ನೆನೆದರೆ ರಕ್ತ ಕುದಿಯುತ್ತದೆ. ಈ ಸಂತ್ರಸ್ತರಿಗೆ ನ್ಯಾಯ ಸಿಕ್ಕೇ ಸಿಗುತ್ತದೆ. ದಾಳಿಕೋರರು ಅತ್ಯುಗ್ರ ಶಿಕ್ಷೆ ಅನುಭವಿಸಲಿದ್ದಾರೆ ಎಂದಿದ್ದಾರೆ.
ಕಾಶ್ಮೀರ ಈಗಷ್ಟೇ ಸಹಜತೆಗೆ ಮರಳುತ್ತಿತ್ತು. ಅಭಿವೃದ್ಧಿ ಕೆಲಸಗಳು ನಡೆಯುತ್ತಿತ್ತು. ಪ್ರವಾಸೋದ್ಯಮ ಅರಳುತ್ತಿತ್ತು. ಇದನ್ನು ಶತ್ರುಗಳಿಗೆ ಸಹಿಸಲು ಸಾಧ್ಯವಾಗಲಿಲ್ಲ. ಇದೇ ಕಾರಣಕ್ಕೆ ದಾಳಿ ಮಾಡಿದ್ದಾರೆ. ಇವರನ್ನು ಯಾರನ್ನೂ ಸುಮ್ಮನೆ ಬಿಡಲ್ಲ ಎಂದಿದ್ದಾರೆ.